ಯಾದಗಿರಿ: ‘ಕೈಉತ್ಪನ್ನಗಳಿಗೆ ನ್ಯಾಯಬೆಲೆ ಕೊಡಿ’ ಎಂದು ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ಗ್ರಾಮ ಸೇವಾ ಸಂಘವು ಹಮ್ಮಿಕೊಂಡಿರುವ ಪಾದಯಾತ್ರೆಯು ಮಂಗಳವಾರ ಜಿಲ್ಲೆಯ ಕೊಡೇಕಲ್‌ನಿಂದ ಆರಂಭವಾಯಿತು.

ಈ ಪಾದಯಾತ್ರೆಯು 15 ದಿನಗಳಲ್ಲಿ 246 ಕಿಲೋ ಮೀಟರ್ ಕ್ರಮಿಸಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಮುಕ್ತಾಯಗೊಳ್ಳಲಿದೆ.

‘ಏಕತಾ ಸಮಾವೇಶ ಮತ್ತು ಪಾದಯಾತ್ರೆಯು ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಕರ ನಿರಾಕರಣಾ ಸತ್ಯಾಗ್ರಹದ ಮುಂದುವರಿಕೆಯಾಗಿದೆ’ ಎಂದು ಪಾದಯಾತ್ರೆ ಕಾರ್ಯಕರ್ತ ರಾಜೇಸಾಬ್ ಬಾಗವಾನ ಹೇಳಿದರು.

2014 ರಲ್ಲಿ ನೇಕಾರರು ಪ್ರಸನ್ನ ಅವರ ನೇತೃತ್ವದಲ್ಲಿ ಸುಸ್ಥಿರ ಬದುಕಿನ ಸತ್ಯಾಗ್ರಹ ನಡೆಸಿದ್ದರು. 2015ರಲ್ಲಿ ಪುನಃ ಮೈಸೂರು ಜಿಲ್ಲೆಯ ಬದನವಾಳುನಲ್ಲಿ ಸತ್ಯಾಗ್ರಹ ನಡೆಸಲಾಗಿತ್ತು. ಈಗ ಕಾಯಕಜೀವಿಗಳ ಏಕತಾ ಸಮಾವೇಶ ಹಾಗೂ ಕೈ ಉತ್ಪನ್ನಗಳಿಗಾಗಿ ಪಾದಯಾತ್ರೆ ಮುಂದುವರಿದಿದೆ.

ಪಾದಯಾತ್ರೆ ಆರಂಭದಲ್ಲಿ ಹಿರಿಯ ಪತ್ರಕರ್ತ ರಂಜಾನ್ ದರ್ಗಾ, ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಇದ್ದರು.

ಬಾಗಲಕೋಟೆ, ರಾಯಚೂರು, ಗದಗ, ಕಲಬುರ್ಗಿ ಜಿಲ್ಲೆಗಳ ಕೈ ಉತ್ಪನ್ನಗಳ ಉತ್ಪಾದಕರು, ಕುಶಲಕರ್ಮಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.