ಗುರುವಾರ , ಆಗಸ್ಟ್ 22, 2019
22 °C

ನಾಗರಪಂಚಮಿಯಂದೇ ಕಂಡ ನಾಗರಹಾವು!

Published:
Updated:
Prajavani

ಬಳ್ಳಾರಿ: ನಾಗರ ಪಂಚಮಿಯ ದಿನವಾದ ಸೋಮವಾರವೇ ನಗರದ ಅವಂಬಾವಿ ಪ್ರದೇಶದ ಶಿಲ್ಪಿನಗರದ ಗುಂಡಪ್ಪ ಎಂಬುವವರ ಗುಡಿಸಲಿನಲ್ಲಿ ಮಧ್ಯಾಹ್ನ 3ರ ವೇಳೆಗೆ ಕಂಡು ಬಂದ ನಾಗರಹಾವನ್ನು ಸ್ನೇಕ್‌ ಬಾಷಾ ಹಿಡಿದು ನಗರದ ಕಿರುಮೃಗಾಲಯಕ್ಕೆ ನೀಡಿದರು.

ಐದು ಅಡಿ ಉದ್ದದ ನಾಗರಹಾವು ಕಾಣಿಸುತ್ತಲೇ ಗುಂಡಪ್ಪ ಅವರು ಸ್ನೇಕ್‌ ಬಾಷಾ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕಿರು ಮೃಗಾಲಯದಲ್ಲಿ ಹಾವು ರಕ್ಷಣೆ ಕಾರ್ಯ ಮಾಡುವ ಬಾಷಾ ಕೂಡಲೇ ಗುಂಡಪ್ಪ ಅವರ ಗುಡಿಸಲಿಗೆ ಬಂದು. ಜೋಪಡೆಯ ಮೇಲ್ಭಾಗದಲ್ಲಿ ಅವಿತುಕೊಂಡಿದ್ದ ಹಾವನ್ನು ಹಿಡಿದರು. ಗುಡಿಸಲಿನಲ್ಲಿ ಬಾಣಂತಿ ಮತ್ತು ಹಸುಕಂದ ಕೂಡ ಇದ್ದರು. ಹಾವನ್ನೂ ಕಂಡ ಕೂಡಲೇ ಮನೆ ಸದಸ್ಯರೆಲ್ಲರೂ ಗುಡಿಸಲಿನ ಹೊರಗೆ ಬಂದು ನಿಂತಿದ್ದರು.

ಹತ್ತು ವರ್ಷದಿಂದ ಬಾಷಾ ಅವರು ಹಾವುಗಳನ್ನು ಹಿಡಿದು ರಕ್ಷಿಸುತ್ತಿದ್ದು, ತಾಲ್ಲೂಕಿನಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಸಂಪರ್ಕ ಸಂಖ್ಯೆ: 9972303092, 9880702157.

Post Comments (+)