ಹೂವಿನಹಡಗಲಿ: ಮುಂಗಾರು ಋತು ಆರಂಭವಾದಾಗಿನಿಂದ ತಾಲ್ಲೂಕಿನಲ್ಲಿ ಹಳ್ಳ ಕೊಳ್ಳ ತುಂಬಿ ಹರಿಯುವಂಥ ಹದವಾದ ಮಳೆ ಒಮ್ಮೆಯೂ ಸುರಿದಿಲ್ಲ. ಈ ವರ್ಷದ ಬಿತ್ತನೆಗೆ ಹಾಗೂ ಬಿತ್ತಿದ ಬೆಳೆಗಳಿಗೆ ತುಂತುರು ಮಳೆಯೇ ಜೀವಾಳವಾಗಿದೆ.

ಸತತ ಬರಗಾಲದಿಂದ ಹೈರಾಣಾಗಿರುವ ತಾಲ್ಲೂಕಿನ ರೈತರು ತುಂತುರು ಮಳೆಯನ್ನೇ ನೆಚ್ಚಿಕೊಂಡು ಬಿತ್ತನೆ ಮಾಡಿದ್ದಾರೆ. ಮೋಡ ಮುಸುಕಿದ ವಾತಾವರಣ ನಡುವೆ ಆಗೊಮ್ಮೆ ಈಗೊಮ್ಮೆ ಹನಿಯುವ ಸಣ್ಣ ಮಳೆಗೆ ಬೆಳೆಗಳು ನಳನಳಿಸುತ್ತಿವೆ. ಬಿಸಿಲಿನ ತಾಪ ಇಲ್ಲದ ಕಾರಣ ಸಮರ್ಪಕ ಮಳೆ ಸುರಿಯದಿದ್ದರೂ ಬೆಳೆಗಳು ಹಚ್ಚ ಹಸಿರಾಗಿವೆ.

ಕಳೆದ ವರ್ಷ ಆರಂಭಿಕ ಮುಂಗಾರು ಚುರುಕಾಗಿದ್ದರಿಂದ ಜೂನ್ ಅಂತ್ಯಕ್ಕೆ ರೈತರು ಬಿತ್ತನೆ ಕಾರ್ಯ ಮುಗಿಸಿದ್ದರು. ಕಾಳು ಕಟ್ಟುವ ಸಂದಿಗ್ದ ಸ್ಥಿತಿಯಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಬೆಳೆಗಳು ಒಣಗಿ ನಿಂತಿದ್ದವು.

ಆರಂಭದಲ್ಲಿ ಉತ್ತಮ ಫಸಲು ಕಂಡಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಅನುಭವಾಗಿತ್ತು. ಆದರೆ, ಈ ವರ್ಷದ ಸ್ಥಿತಿ ಭಿನ್ನವಾಗಿದೆ. ಬಹುತೇಕ ರೈತರು ಬಿದ್ದ ಅಲ್ಪ ಸ್ವಲ್ಪ ಮಳೆಗೆ ಬಿತ್ತನೆ ಮಾಡಿದ್ದರೆ, ಕೆಲವರು ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಂಡು ಹದ ಮಳೆಗಾಗಿ ಕಾಯುತ್ತಿದ್ದಾರೆ.

ಈ ವರ್ಷದ ಜುಲೈ ಅಂತ್ಯಕ್ಕೆ ತಾಲ್ಲೂಕಿನಲ್ಲಿ 273 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಈವರೆಗೆ 220 ಮಿ.ಮೀ. ಮಳೆಯಾಗಿದ್ದು, ಶೇ 19ರಷ್ಟು ಮಳೆ ಕೊರತೆ ಉಂಟಾಗಿದೆ. ತಾಲ್ಲೂಕಿನ ಮೂರು ಹೋಬಳಿಗಳ ಪೈಕಿ ಹಿರೇಹಡಗಲಿ ಹೋಬಳಿಯಲ್ಲಿ ಸರಾಸರಿ 213 ಮಿ.ಮೀ. ಉತ್ತಮ ಮಳೆಯಾಗಿದ್ದು, ಇಟ್ಟಿಗಿ ಹೋಬಳಿಯಲ್ಲಿ 210 ಮಿ.ಮೀ., ಹೂವಿನಹಡಗಲಿ ಹೋಬಳಿಯಲ್ಲಿ 197 ಮಿ.ಮೀ. ಮಳೆಯಾಗಿದೆ.

ತಾಲ್ಲೂಕಿನ 53,961 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಪೈಕಿ 43,735 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ 81.05ರಷ್ಟು ಸಾಧನೆಯಾಗಿದೆ. ಕಳೆದ ವರ್ಷ ಜೂನ್ ಅಂತ್ಯಕ್ಕೆ 46,693 ಹೆಕ್ಟೇರ್ (ಶೇ 86.53) ಬಿತ್ತನೆಯಾಗಿತ್ತು.

ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಋತುವಿನಲ್ಲಿ ಜೋಳ 1,736 ಹೆಕ್ಟೇರ್, ಮೆಕ್ಕೆಜೋಳ 24,442 ಹೆ., ಸಜ್ಜೆ, 2,323 ಹೆ., ಭತ್ತ 3,352 ಹೆ., ತೊಗರಿ 2,732 ಹೆ., ಅಲಸಂದಿ ಹಾಗೂ ದ್ವಿದಳ ಧಾನ್ಯಗಳು 135 ಹೆ., ಶೇಂಗಾ 2,196 ಹೆ., ಸೂರ್ಯಕಾಂತಿ 2,440 ಹೆ, ನವಣೆ, ರಾಗಿ, ಸಾಮೆ ಸೇರಿ 813 ಹೆಕ್ಟೇರ್ ಬಿತ್ತನೆಯಾಗಿದೆ.

‘ಕಳೆದ ನಾಲ್ಕೈದು ವರ್ಷ ಕೆಟ್ಟ ಬರಗಾಲ ಅನುಭವಿಸಿ ಸಾಕಾಗಿ ಹೋಗಿದೆ. ಈ ವರ್ಷ ದೇವರ ಮೇಲೆ ಭಾರ ಹಾಕಿ ಬಿದ್ದ ಅಲ್ಪ ಸ್ವಲ್ಪ ಮಳೆಗೇ ಬಿತ್ತನೆ ಮಾಡಿದ್ದೇವೆ. ಸದ್ಯ ಉತ್ತಮ ಮಳೆ ಸುರಿದರೆ ಬೆಳೆಗಳು ಚೆನ್ನಾಗಿ ಬರುತ್ತವೆ. ಇಲ್ಲದಿದ್ದರೆ ಮತ್ತೆ ಗೋಳು ತಪ್ಪಿದ್ದಲ್ಲ’ ಎಂದು ಉತ್ತಂಗಿ ಗ್ರಾಮದ ರೈತ ಜಿ.ನಾಗಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.