ಶನಿವಾರ, ಜೂನ್ 19, 2021
28 °C

ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು, ಇನ್‌ಸ್ಪೆಕ್ಟರ್‌ ಅಮಾನತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ರಾಷ್ಟ್ರಧ್ವಜ ತೆಗೆದು ಹಾಕಿ ಅಗೌರವ ತೋರಿದ ವಡಗಾವಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಅವರನ್ನು ಅಮಾನತುಗೊಳಿಸಬೇಕೆಂದು ಕುರುಬರ ಪಡೆ ಆಗ್ರಹಿಸಿದೆ.

ಈ ಸಂಬಂಧ ಪಡೆಯ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಸಂಗೊಳ್ಳಿ ರಾಯಣ್ಣ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನುಭಾವ. ಅಂತಹ ವ್ಯಕ್ತಿಯ ಪ್ರತಿಮೆ ತೆರವುಗೊಳಿಸಿ ಅಪಮಾನ ಮಾಡಲಾಗಿದೆ. ಅದನ್ನು ವಿರೋಧಿಸಿ ಕನ್ನಡಿಗರ ಮೇಲೆ ಲಾಠಿಪ್ರಹಾರ ನಡೆಸಿ ಇನ್‌ಸ್ಪೆಕ್ಟರ್‌ ದೌರ್ಜನ್ಯ ಎಸಗಿದ್ದಾರೆ. ಅವರ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕು. ಪ್ರತಿಮೆ, ರಾಷ್ಟ್ರ ಧ್ವಜ ಮೂಲ ಸ್ಥಳದಲ್ಲಿ ಮರು ಸ್ಥಾಪಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪಡೆಯ ತಾಲ್ಲೂಕು ಅಧ್ಯಕ್ಷ ಯಮನೂರು ಸ್ವಾಮಿ ಮೇಟಿ, ಉಪಾಧ್ಯಕ್ಷ ಟಿ. ಪರಮೇಶ್ವರ, ಮುಖಂಡರಾದ
ಎಚ್.ಮಹೇಶ್, ಬಂದಿ ಭರಮಪ್ಪ, ಮಾನಳ್ಳಿ ವಿರೇಶ್, ದಾಸನಾಳ್ ಹನುಮೇಶ್, ತಾಯಪ್ಪ ಬಿಸಾಟಿ, ಜಂಬಯ್ಯ ಮೇಟಿ, ಪರಮೇಶ್ವರ, ವೆಂಕಟೇಶ್, ಪ್ರಶಾಂತ್ ಕಡ್ಡಿರಾಂಪುರ, ವೆಂಕಟೇಶ್, ಕೆ.ತಾಯಪ್ಪ, ಬಿ.ನಾಗಪ್ಪ, ಶಿವಲಿಂಗಪ್ಪ ಸಂಕ್ಲಾಪುರ, ದಲ್ಲಾಳಿ ಕುಬೇರ, ಗೌರಿ ಶಂಕರ್ ಬಣಕಾರ್, ಗಂಟೆ ಸೋಮಶೇಖರ್, ದಾಸನಾಳ ಭೀಮಜ್ಜ, ವೀರಭದ್ರಪ್ಪ ದಮ್ಮೂರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು