ಹೊಸಪೇಟೆ: ಐ.ಪಿ.ಸಿ. ಕಾಯ್ದೆಗೆ ತಿದ್ದುಪಡಿ ತಂದು ಗಲ್ಲು ಶಿಕ್ಷೆ ರದ್ದುಪಡಿಸಬೇಕೆಂದು ಅಖಿಲ ಭಾರತ ವಕೀಲರ ಸಂಘ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಸಂಘದ ಪದಾಧಿಕಾರಿಗಳು ಮಂಗಳವಾರ ಉಪ ತಹಶೀಲ್ದಾರ್ ಅಮರನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಗಲ್ಲು ಶಿಕ್ಷೆಯ ಜತೆಗೆ ರಾಜದ್ರೋಹದ ಕಲಂ ಕೂಡ ರದ್ದುಪಡಿಸಬೇಕು. ಪೊಲೀಸರು ಎನ್‌ಕೌಂಟರ್ ಮಾಡಿದರೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರಶ್ನಿಸಿ ಪ್ರಕರಣ ದಾಖಲಿಸಲು ನೇರ ಅವಕಾಶ ಕಲ್ಪಿಸಬೇಕು. ತ್ವರಿತ ನ್ಯಾಯದಾನಕ್ಕಾಗಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

‘ಗಲ್ಲು ಶಿಕ್ಷೆ ಎಸಗಿದರೆ ಭವಿಷ್ಯದಲ್ಲಿ ಯಾರು ಕೂಡ ಪೈಶಾಚಿಕ ಕೃತ್ಯ ಎಸಗುವುದಿಲ್ಲ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಯಾವುದೇ ಒಂದು ಅಪರಾಧ ಮಾಡಬೇಕಾದರೆ ವ್ಯಕ್ತಿಯ ಮನಃಸ್ಥಿತಿ, ಪರಿಸ್ಥಿತಿ, ಉದ್ದೇಶ ಸೇರಿದಂತೆ ಇತರೆ ಕಾರಣಗಳು ಸೇರಿರುತ್ತವೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿ ಭಿನ್ನವಾಗಿರುವುದರಿಂದ ಎಲ್ಲರಿಗೂ ಒಂದೇ ದೃಷ್ಟಿಕೋನದಿಂದ ನೋಡುವುದು ತಪ್ಪಾಗುತ್ತದೆ’ ಎಂದು ಪ್ರಸ್ತಾಪಿಸಿದ್ದಾರೆ.

ಸಂಘದ ಜಿಲ್ಲಾ ಕಾರ್ಯದರ್ಶಿ ಎ. ಕರುಣಾನಿಧಿ, ತಾಲ್ಲೂಕು ಅಧ್ಯಕ್ಷ ಜಿ. ಕೊಟ್ರಗೌಡ, ಕಾರ್ಯದರ್ಶಿ ಕೆ.ಸಿ. ಶರಣಪ್ಪ, ಹಿರಿಯ ವಕೀಲ ಕೆ. ಪ್ರಹ್ಲಾದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.