ಹೊಸಪೇಟೆ (ವಿಜಯನಗರ): ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿಯು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪೆಹಲ್‌ಗಾಮ್ ಜಿಲ್ಲೆಯ ‘ಟುಲಿಯನ್ ಲೇಕ್’ನಲ್ಲಿ ಏರ್ಪಡಿಸಿದ್ದ ಪರ್ವತಾರೋಹಣ ಸಾಹಸ ತರಬೇತಿಯಲ್ಲಿ ಇಲ್ಲಿನ ಚಿತ್ತವಾಡ್ಗಿ ಇಪ್ಪಿತ್ತೇರಿ ಮಾಗಾಣಿಯ ಕಟಗಿ ರಮೇಶ ಭಾಗವಹಿಸಿದ್ದರು.
ಮಂಜಿನಿಂದ ಆವರಿಸಿಕೊಂಡ 16,500 ಅಡಿ ಎತ್ತರದ ಪರ್ವತವನ್ನು 22 ಗಂಟೆಗಳಲ್ಲಿ ಹತ್ತಿದ್ದಾರೆ. ಯಶಸ್ವಿಯಾಗಿ ತರಬೇತಿ ಪೂರೈಸಿದ ಅವರು ಹಿಮಾಲಯ ಪರ್ವತಾರೋಹಣಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ನಗರದ ಒಳಾಂಗಣ ಕ್ರೀಡಾಂಗಣದ ಈಜು ಕೊಳದಲ್ಲಿ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿರುವ ರಮೇಶ, ರಾಮು ಎಂಬ ಹೆಸರಿನಿಂದ ಎಲ್ಲರಿಗೂ ಚಿರಪರಿಚಿತ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.