ಸೋಮವಾರ, ಮಾರ್ಚ್ 27, 2023
28 °C
ಹೊಳಲು-–ಹ್ಯಾರಡ ರಸ್ತೆ ಕಾಮಗಾರಿ ಕಳಪೆ: ಆರೋಪ

ಆರು ತಿಂಗಳಲ್ಲೇ ಕಿತ್ತುಹೋದ ರಸ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ತಾಲ್ಲೂಕಿನ ಹೊಳಲು- ಹ್ಯಾರಡ ರಸ್ತೆ ನಿರ್ಮಾಣ ವಾಗಿ ಆರು ತಿಂಗಳು ಕಳೆದಿಲ್ಲ, ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಡಾಂಬಾರು ಪದರು, ಜಲ್ಲಿಕಲ್ಲುಗಳು ಕಿತ್ತು ಮೇಲೆ ಬಂದಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

‘ಬಹುದಿನಗಳಿಂದ ದುರಸ್ತಿ ಕಾಣದ ರಸ್ತೆಯನ್ನು ಈಚೆಗೆ ಅಭಿವೃದ್ಧಿ ಪಡಿಸಲಾಗಿತ್ತು. ನಿರ್ಮಾಣವಾದ ಕೆಲವೇ ದಿನಗಳಲ್ಲಿ ರಸ್ತೆಯ ಬಹುಭಾಗ ಕಿತ್ತುಹೋಗಿದೆ. ಕಾಮಗಾರಿ ಕಳಪೆಯಾಗಿ ರುವುದೇ ಇದಕ್ಕೆ ಕಾರಣ’ ಎಂದು ಹ್ಯಾರಡ ಗ್ರಾಮಸ್ಥರು
ಆರೋಪಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಯಿಂದ ₹1.50 ಕೋಟಿ ವೆಚ್ಚದಲ್ಲಿ 8 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯವನ್ನು ಮಾರ್ಚ್‌ನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಹೊಸದಾಗಿ ನಿರ್ಮಾಣವಾಗಿರುವ ರಸ್ತೆಯ ಬಹುಭಾಗ ಕಿತ್ತು ಹೋಗಿರು ವುದರಿಂದ ವಾಹನಗಳ ಓಡಾಟಕ್ಕೆ ಯೋಗ್ಯವಾಗಿಲ್ಲ ಎಂದು ಜನರು ದೂರಿದ್ದಾರೆ.

‘ರಸ್ತೆ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದ್ದು, ಆರು ತಿಂಗಳಲ್ಲಿಯೇ ನಿಜಬಣ್ಣ ಬಯಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ನಡೆಯು ವಾಗ ನಿಗಾ ವಹಿಸದಿರುವುದೇ ಇದಕ್ಕೆ ಕಾರಣ’ ಎಂದು ಹ್ಯಾರಡ ಗ್ರಾಮದ ಸಿಪಿಐ ಮುಖಂಡ ಶಾಂತರಾಜ ಜೈನ್ ದೂರಿದ್ದಾರೆ.

‘ಕಾಮಗಾರಿಯನ್ನು ಅಂದಾಜು ಪತ್ರಿಕೆಯಂತೆ ನಿರ್ವಹಿಸದೇ ಹೆಚ್ಚು ಲಾಭದ ಆಸೆಯಿಂದ ಗುತ್ತಿಗೆದಾರರು ತೀರಾ ಕಳಪೆ ಕೆಲಸ ಮಾಡಿದ್ದಾರೆ. ಹೊಸದಾಗಿ ನಿರ್ಮಾಣವಾದ ರಸ್ತೆಯ ಲ್ಲಿಯೇ ಕೆಲವೆಡೆ ಆಳವಾದ ಗುಂಡಿಗಳು ಬಿದ್ದಿವೆ. ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮೇಲಧಿಕಾರಿಗಳು ಗಮನಹರಿಸಿ, ರಸ್ತೆಯ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಜೈನ್ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.