ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ಅಗತ್ಯಕ್ಕೆ ತಕ್ಕಂತೆ ಸಂಪತ್ತು ಇರಲಿ

Last Updated 9 ಅಕ್ಟೋಬರ್ 2021, 15:30 IST
ಅಕ್ಷರ ಗಾತ್ರ

ಸಂಪತ್ತೆಂದರೆ ಕೇವಲ ಹಣ,ಭೂಮಿ, ಬಂಗಾರ, ಬೆಳ್ಳಿ ಅಲ್ಲ. ಈ ಸಂಪತ್ತು ಬರೀ ಭೌತಿಕವಾದದ್ದು. ಮನುಷ್ಯ ಉನ್ನತಿಗಾಗಿ ಪ್ರೀತಿ, ಪ್ರೇಮ, ವಿಶ್ವಾಸ, ಕ್ಷಮೆ, ದಯೆ, ಶಾಂತಿ ಸೈರಣೆಯ ಸಂಪತ್ತು ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ವಿಕಾರ ಭಾವಗಳು ಮೂಡಿದರೆ ಸರ್ವನಾಶಕ್ಕೆ ಕಾರಣವಾಗುತ್ತವೆ. ಮುಖ್ಯವಾಗಿ ಶಿವ ಚಿಂತನೆ, ಶಿವ ಧ್ಯಾನ ಮಾಡುವುದರಿಂದ ಮನಸ್ಸಿನ ತೊಳಲಾಟ ನಿವಾರಣೆಯಾಗಿ ಶಿವ ರೂಪ, ಸಚ್ಚಾರಿತ್ರ್ಯದ ಗುಣಗಳು ಮೂಡುತ್ತವೆ. ಸಮಾಜದ ಸ್ವಾಸ್ಥ ಕಾಯ್ದುಕೊಳ್ಳುವಲ್ಲಿ ಇವೆಲ್ಲವು ಸಹಕಾರಿಯಾಗಿವೆ. ಭೌತಿಕ ಸಂಪತ್ತು ಹೆಚ್ಚಾದಂತೆ ಮನಸ್ಸು ಕಲುಷಿತಗೊಳ್ಳುತ್ತದೆ. ಸಂಪತ್ತು ಬದುಕಿನ ಅವಶ್ಯಕತೆಗೆ ತಕ್ಕಷ್ಟು ಇದ್ದರೆ ಮನುಷ್ಯ ಸುಖಿಯಾಗಿರುತ್ತಾನೆ. ಹೆಚ್ಚಾದರೆ ವಿಲಾಸಿಯಾಗಿ ನಾನಾ ಸಂಕಷ್ಟಗಳಿಗೆ ಗುರಿಯಾಗುತ್ತಾನೆ. ಪರಿಶುದ್ಧ ಕಾಯಕದಿಂದ ಬಂದ ಸಂಪಾದನೆಯ ಒಂದು ಭಾಗವನ್ನು ಸಮಾಜದ ಹಿತಕ್ಕೆ ಬಳಸಬೇಕು. ದುರಾಸೆಯಿಂದ ಅನಂತ ಕಾಲ ಬದುಕಬಹುದು ಎಂಬುದು ಕನಸಿನ ಮಾತು. ಮನುಷ್ಯನ ದುರಾಸೆಗೆ ಪ್ರಕೃತಿಯೇ ಪಾಠ ಕಲಿಸಿರುವುದನ್ನು ಕಂಡಿದ್ದೇವೆ. ನಿಷ್ಠೆ, ಪ್ರಾಮಾಣಿಕತೆ,ಶ್ರದ್ಧೆ, ಪ್ರೀತಿ, ಸೇವೆಯ ಭಾವನೆಗಳು ಅರಳಿದರೆ ಬದುಕು ಸಾರ್ಥಕಗೊಳ್ಳುತ್ತದೆ.

- ಹಿರಿಶಾಂತವೀರ ಮಹಾಸ್ವಾಮಿಗಳು, ಗವಿಮಠ, ಹೂವಿನಹಡಗಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT