ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮ್ಸ್‌ ಶವಾಗಾರ: ಮುಂದುವರಿದ ಸಮಸ್ಯೆ

Last Updated 3 ಜೂನ್ 2020, 10:14 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೂಲಸೌಕರ್ಯ ಕೊರತೆಯ ಸಮಸ್ಯೆ ಮುಂದುವರಿದಿದೆ. ಒಂದೇ ಕೋಲ್ಡ್‌ ಸ್ಟೋರೇಜ್‌ ಪೆಟ್ಟಿಗೆಯಲ್ಲಿ ಎರಡು ಶವವನ್ನು ಇರಿಸಿದ್ದ ಫೋಟೊ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಎಂಟು ಶವಗಳನ್ನಿಡುವ ಎರಡು ಕೋಲ್ಡ್‌ ಸ್ಟೋರೇಜ್‌ ಕೆಟ್ಟಿರುವ ಪರಿಣಾಮ ಶವಗಳನ್ನು ಸ್ಟ್ರೆಚರ್‌ನಲ್ಲಿದ್ದಂತೆಯೇ ನೆಲದ ಮೇಲಿಟ್ಟಿದ್ದ ಘಟನೆ ಒಂದು ವಾರದ ಹಿಂದೆ ವೈರಲ್‌ ಆಗಿತ್ತು.

ಕೊರೊನಾ ಸೋಂಕುಳ್ಳವರು ಮೃತಪಟ್ಟ ಬಳಿಕ ಅವರ ಗಂಟಲು ದ್ರವದ ಪರೀಕ್ಷೆ ವರದಿ ಬರುವವರೆಗೂ ಶವ ಸಂಸ್ಕಾರಕ್ಕೆ ಅವಕಾಶವಿಲ್ಲದೇ ಇರುವುದು, ವಿವಿಧ ಕಾರಣಗಳಿಂದ ಮೃತಪಟ್ಟವರನ್ನೂ ಇದೇ ಶವಾಗಾರದಲ್ಲೇ ಇಡಬೇಕಾಗಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಿಮ್ಸ್‌ ನಿರ್ದೇಶಕ ಡಾ.ಬಿ.ದೇವಾನಂದ್‌, ‘ದುರಸ್ತಿಗೆ ಕಳಿಸಲಾಗಿರುವ ಎರಡು ಕೋಲ್ಡ್ ಸ್ಟೋರೇಜ್ ಪೆಟ್ಟಿಗೆಗಳು ಶೀಘ್ರ ಬರಲಿವೆ. ಬುಧವಾರ ಹೊಸದೊಂದು ಕೋಲ್ಡ್ ಸ್ಟೋರೇಜ್ ಪೆಟ್ಟಿಗೆಯನ್ನು ಖರೀದಿಸಲಾಗುತ್ತಿದೆ. ಅದರಲ್ಲಿ ನಾಲ್ಕು ಶವಗಳನ್ನು ಇಡಬಹುದು. ಇನ್ನಷ್ಟು ಪೆಟ್ಟಿಗೆಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT