ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: 182ನೇ ವಿಶ್ವ ಛಾಯಾಗ್ರಾಹಣ ದಿನಾಚರಣೆ

Last Updated 7 ಸೆಪ್ಟೆಂಬರ್ 2021, 10:26 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ‘ಮದುವೆ ಮತ್ತಿತರ ಸಮಾರಂಭದ ಛಾಯಾಚಿತ್ರಗಳನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಟೆಕ್ನೋ ಸಾಫ್ಟ್‌ವೇರ್ ಸಹಕಾರಿಯಾಗಲಿದೆ, ವೃತ್ತಿಪರ ಛಾಯಾಗ್ರಾಹಕರು ಇದರ ಬಳಕೆ ಮಾಡಬೇಕು’ ಎಂದು ತುಂಗಭದ್ರಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಂ.ಸೋಮಶೇಖರ್ ಸಲಹೆ ನೀಡಿದರು.

ನಗರದ ನಿಶಾನಿ ಕ್ಯಾಂಪ್‌ನಲ್ಲಿ ಸೋಮವಾರ ಆಯೋಜಿಸಿದ್ದ 182ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಮಾತನಾಡಿದರು.

‘ಯಾವುದೇ ಶುಭ ಸಮಾರಂಭಗಳ ಫೋಟೋ ತೆಗೆದ ನಂತರ ಅವುಗಳ ಆಯ್ಕೆಯದ್ದೇ ಸಮಸ್ಯೆ ಉಂಟಾಗುತ್ತದೆ. ಟೆಕ್ನೋ ಸಾಫ್ಟ್‌ವೇರ್ ಮೂಲಕ ಎಲ್ಲಾ ಫೋಟೋಗಳನ್ನು ವೆಬ್ ಲಿಂಕ್ ಮೂಲಕ ಗ್ರಾಹಕರಿಗೆ ಕಳಿಸಬಹುದು. ಟೆಕ್ನೋ ಸಾಫ್ಟ್‌ವೇರ್ ಮೂಲಕ ಗ್ರಾಹಕರಿಗೆ ಫೋಟೋ ಆಯ್ಕೆಗೆ ಅವಕಾಶವಿದೆ. ಅವರು ಆಯ್ಕೆ ಮಾಡಿದ ಫೋಟೋಗಳನ್ನು ಯಾವುದೇ ಗೊಂದಲವಿಲ್ಲದೆ ಆಲ್ಬಂ ಮಾಡಬಹುದು’ ಎಂದರು.

ವೃತ್ತಿಪರ ಛಾಯಾಗ್ರಾಹಕರಿಗೆ ‘ಐದೃಷ್ಟಿ’ ಸಂಸ್ಥೆಯಿಂದ ನೇತ್ರ ತಪಾಸಣೆ ಮಾಡಲಾಯಿತು. ಛಾಯಾಗ್ರಾಹಕರಿಗೆ 'ಮದುವೆಯ ಮಧುರ ಕ್ಷಣಗಳು' ಎಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ್‌ ಕುಮಾರ್‌, ಖಜಾಂಚಿ ಸಂಜಯ್‌, ತಾಹೀರ್ ಹುಸೇನ್, ರಾಮಬಾಬು, ಲವ, ಮಂಜು, ಬಾಲಾಜಿ, ಉಮೇಶ್, ಗಣೇಶ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT