ಭಾನುವಾರ, ಏಪ್ರಿಲ್ 5, 2020
19 °C

ಯಡಿಯೂರಪ್ಪ ಮಗ ವಿಜಯೇಂದ್ರ ಸೂಪರ್ ಸಿಎಂ ಅಲ್ಲ‌‌: ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಬಿ.ಎಸ್ ಯಡಿಯೂರಪ್ಪ ಅವರು ಹೋರಾಟಗಾರರು. ಅವರ ಅಂತ್ಯವೂ ಹೋರಾಟದಲ್ಲೇ ಮುಗಿಯಬೇಕು‌. ಅವರ ಉತ್ತರಾಧಿಕಾರಿ ಕುರಿತಾದ ಯಾವುದೇ ಊಹಾಪೋಹಗಳಿಲ್ಲ. ಅವರೇ ಮುಖ್ಯ ಮಂತ್ರಿಯಾಗಿರುತ್ತಾರೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಮಂಗಳವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಪ್ರಶ್ನಾತಿತ ನಾಯಕ. ಅವರ ಮಗ ವಿಜಯೇಂದ್ರ ಸೂಪರ್ ಸಿಎಂ ಅಲ್ಲ‌‌. ಸಿಎಂಗೆ 78 ಆಗಿರಬಹುದು. ಹಾಗೆಂದು ವಿಜಯೇಂದ್ರ ಉತ್ತರಾಧಿಕಾರಿ ಅಲ್ಲ. ನಲ್ವತ್ತೆರಡು ವರ್ಷ, ಏಳು ಜನ ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಒಬ್ಬರನ್ನು ಮುಖ್ಯಮಂತ್ರಿ ಮಾಡಲು ಏನು ಮಾಡಲಾಗಿದೆ ಎಲ್ಲವೂ ಗೊತ್ತು, ಎಲ್ಲ ಅನುಭವವೂ ಇದೆ’ ಎಂದರು.

‘ವಸತಿ ಖಾತೆ ಕೊಟ್ಟಿರುವ ಕುರಿತು ಕೊಂಚ ನನಗೆ ಅಳುಕಿದೆ. ಆದರೆ, ಖಾತೆಯಿಂದ ಜನ ನಂಬುತ್ತಾರೆ. ಸೋಮಣ್ಣ ಬಂದರೆ ಮನೆ ಕೊಡುತ್ತಾನೆ ಎನ್ನುತ್ತಾರೆ’ ಎಂದು ಹೇಳಿದರು.

‘ಇಬ್ರಾಹಿಂ ಎಂದಾದರೂ ನಿಜ ಹೇಳಿದಾರಾ? ನಾವೆಲ್ಲ ಜೊತೆಗಿದ್ದವರು. ಅವರು ನೆಸೆ ಪುಡಿ ಹಾಕ್ತಾರೆ ಅಷ್ಟೆ’ ಎಂದು ವ್ಯಂಗ್ಯವಾಡಿದರು. 

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಶಾಸಕ ಜಿ.ಸೋಮಶೇಖರರೆಡ್ಡಿ, ಸಂಸದ ದೇವೇಂದ್ರಪ್ಪ, ವಸತಿ‌ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾದ್ ಮನೋಹರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು