ಬುಧವಾರ, ಏಪ್ರಿಲ್ 1, 2020
19 °C
ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್‌

₹12 ಕೋಟಿ ವಂಚನೆ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಐಟಿಐ ಲಿಮಿಟೆಡ್ ಬೆಂಗಳೂರು’ ಕಂಪನಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಗುಜರಾತ್‌ನ ‘ಮೈಂಡರೈ ಸಿಸ್ಟಮ್ಸ್’ ಕಂಪನಿಯವರು ಬ್ಯಾಂಕ್‌ನಿಂದ ₹12.07 ಕೋಟಿ ಪಡೆದುಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ಅನೂಪ್‌ ಕುಮಾರ್ ಎಂಬುವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

‘ದೂರವಾಣಿ ನಗರದಲ್ಲಿರುವ ‘ಐಟಿಐ ಲಿಮಿಟೆಡ್ ಬೆಂಗಳೂರು’ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಆಗಿರುವ ಅನೂಪ್ ಕುಮಾರ್ ನೀಡಿರುವ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ನಮ್ಮ ಕಂಪನಿ ಕೆಲಸಕ್ಕಾಗಿ ‘ಎನ್‌ಎಂಎಸ್’ ಸಾಫ್ಟ್‌ವೇರ್ ಅಗತ್ಯವಿತ್ತು. ಅದನ್ನು ಖರೀದಿಸಲು ‘ಮೈಂಡರೈ ಸಿಸ್ಟಮ್ಸ್’ ಕಂಪನಿಯವರನ್ನು ಸಂಪರ್ಕಿಸಿದ್ದೆವು. ನಮ್ಮ ಕಂಪನಿ ಅವರು ತಿಳಿದುಕೊಂಡಿದ್ದರು. ನಂತರ, ನಮ್ಮದೇ ಕಂಪನಿ ಹೆಸರಿನಲ್ಲಿ ಆರೋಪಿಗಳು ನಕಲಿ ದಾಖಲೆ ಹಾಗೂ ನಕಲಿ ಸೀಲ್ ಸೃಷ್ಟಿಸಿದ್ದರು’ ಎಂಬುದಾಗಿ ಅನೂಪ್‌ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

‘ಕಂಪನಿಗೆ ನಂಬಿಕೆದ್ರೋಹ ಮಾಡಿರುವ ಮೈಂಡರೈ ಸಿಸ್ಟಮ್ಸ್ ಕಂಪನಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಅವರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)