ಬೆಂಗಳೂರು: ನಗರದ ಬೃಹತ್ ಮೂಲಸೌಕರ್ಯಗಳ ಅಭಿವೃದ್ಧಿಗೆ ರಚಿಸಲಾಗಿರುವ ವಿಶೇಷ ಉದ್ದೇಶದ ಸಂಸ್ಥೆ (ಎಸ್ಪಿವಿ)– ‘ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ’ (ಬಿ–ಸ್ಮೈಲ್) ತನ್ನ ಕಚೇರಿ ನವೀಕರಣಕ್ಕಾಗಿ ₹1.27 ಕೋಟಿ ವೆಚ್ಚ ಮಾಡಲಿದೆ.

ರಾಜ್ಯ ಸರ್ಕಾರ ಮೂಲಸೌಕರ್ಯಗಳ ಅಭಿವೃದ್ಧಿಗೆ ಒದಗಿಸಲಿರುವ ₹7 ಸಾವಿರ ಕೋಟಿ ಅನುದಾನದಲ್ಲಿ ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ‘ಬಿ–ಸ್ಮೈಲ್’ ಅನ್ನು ಸ್ಥಾಪಿಸಲಾಗಿದೆ. ಮೇ 25ರಂದು ತನ್ನ ಕಾರ್ಯಾಚರಣೆಯನ್ನು ಆರಂಭಿಸಿರುವ ‘ಬಿ–ಸ್ಮೈಲ್’, ತನ್ನ ಕಚೇರಿ ನವೀಕರಣಕ್ಕೆ ಮೊದಲ ಟೆಂಡರ್ ಆಹ್ವಾನಿಸಿದೆ.

ತಿಮ್ಮಯ್ಯ ರಸ್ತೆಯಲ್ಲಿರುವ ಯುಎನ್ಐ ಬಿಲ್ಡಿಂಗ್ನಲ್ಲಿರುವ ಬಿ–ಸ್ಮೈಲ್ ಕಚೇರಿಯ ನವೀಕರಣ ಹಾಗೂ ಒಳಾಂಗಣ ವಿನ್ಯಾಸವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಜಿಎಸ್ಟಿ ಹೊರತುಪಡಿಸಿದಂತೆ ₹1.27 ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ನವೀಕರಣಕ್ಕೆ ಜುಲೈ ಅಂತ್ಯದಿಂದ ಎರಡು ತಿಂಗಳ ಗಡುವು ನೀಡಲಾಗುತ್ತದೆ.

ಯೋಜನೆಗಳನ್ನು ಮುಗಿಸಿರುವ ಅತ್ಯಾಧುನಿಕ ಬೆಂಗಳೂರು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ‘ಬಿ–ಸ್ಮೈಲ್’ ಕಚೇರಿ ಕಾರ್ಯನಿರ್ವಹಿಸುತ್ತಿದೆ.

ಹೊರ ವರ್ತುಲ ರಸ್ತೆಗೆ ಟೆಂಡರ್: ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ರಸ್ತೆ ಹಾಗೂ ಸರ್ವೀಸ್ ರಸ್ತೆಯನ್ನು ನಿರ್ಮಿಸಲು ಸಮಗ್ರ ವಿಸ್ತೃತಾ ಯೋಜನಾ ವರದಿ (ಡಿಪಿಆರ್) ತಯಾರಿಸಲು ‘ಬಿ–ಸ್ಮೈಲ್’ ಟೆಂಡರ್ ಆಹ್ವಾನಿಸಿದೆ.

ಜುಲೈ 23ರಂದು ತಾಂತ್ರಿಕ ಬಿಡ್ ತೆರೆಯಲಿದ್ದು, ಕಾರ್ಯಾದೇಶ ನೀಡಿದ ಎರಡು ತಿಂಗಳಲ್ಲಿ ಡಿಪಿಆರ್ ಸಿದ್ಧಪಡಿಸಲು ಟೆಂಡರ್ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.