ಬುಧವಾರ, ಫೆಬ್ರವರಿ 26, 2020
19 °C

ಮೂವರು ಪೊಲೀಸ್ ಸಿಬ್ಬಂದಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನುಮತಿ ಪಡೆಯದೆ ರಜೆ ಹಾಕಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ರಾಜಭವನದ ಮೂವರು ಪೊಲೀಸ್ ಸಿಬ್ಬಂದಿಯನ್ನು ಆರು ತಿಂಗಳ ಅವಧಿಗೆ ಅಮಾನತು ಮಾಡಲಾಗಿದೆ.

ಕೆಎಸ್‍ಐಎಸ್‍ಎಫ್‌ ಕಾನ್‌ಸ್ಟೆಬಲ್‌ಗಳಾದ ಹುಚ್ಚೇಗೌಡ, ತಿಮ್ಮಯ್ಯ, ಪ್ರವೀಣ್ ಕುಮಾರ್ ಅಮಾನತುಗೊಂಡವರು. ರಾಜಭವನದಿಂದ ಯಾವುದೇ ಅನುಮತಿ ಪಡೆಯದೆ ಈ ಸಿಬ್ಬಂದಿ, ತಮ್ಮ ವರ್ಗಾವಣೆ ಸಂಬಂಧ ಮೇಲಧಿಕಾರಿಯ ಭೇಟಿಗೆ ತೆರಳಿದ್ದರು. ಹೀಗಾಗಿ, ಒಂದನೇ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೆಂಟ್ ಮತ್ತು ಶಿಸ್ತು ಪ್ರಾಧಿಕಾರಿ ಎ. ನಾಗರಾಜ್ ಅವರು ಮೂವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಹಲವು ದಿನಗಳಿಂದ ರಾಜಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಕಾನ್‌ಸ್ಟೆಬಲ್‌ಗಳು, ವರ್ಗಾವಣೆಗಾಗಿ ಹೋಗಿದ್ದರು ಎನ್ನುವ ಕಾರಣ ನೀಡಿ ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)