ಬೆಂಗಳೂರು: ರಾಜ್ಯದ 38 ತಾಲ್ಲೂಕುಗಳಲ್ಲಿ ಅಂತರ್ಜಲ ಸುರಕ್ಷಿತವಾಗಿಲ್ಲ. ಅಲ್ಲಿನ ನೀರು ಕುಡಿಯಲು ಮತ್ತು ಬೆಳೆಗಳಿಗೆ ಯೋಗ್ಯವಾಗಿಲ್ಲ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೇಂದ್ರ ಅಂತರ್ಜಲ ಮಂಡಳಿ ಜಂಟಿಯಾಗಿ ನಡೆಸಿರುವ ಸಮೀಕ್ಷೆಯಿಂದ ಈ ವಿಷಯ ಗೊತ್ತಾಗಿದೆ ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 234 ಜಲಾನಯನ ಪ್ರದೇಶಗಳಿದ್ದು, 100ಕ್ಕೂ ಹೆಚ್ಚು ಜಲಾನಯನ ಪ್ರದೇಶಗಳು ಸಂಕಷ್ಟದ ಸ್ಥಿತಿಯಲ್ಲಿವೆ. 64 ಜಲಾನಯನ ಪ್ರದೇಶಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಕೆ ಮಾಡಲಾಗಿದೆ. ಎರಡು ಪ್ರದೇಶಗಳು ಆಪತ್ತು, 13 ಪ್ರದೇಶಗಳು ಅರೆ ಆಪತ್ತಿನ ಸ್ಥಿತಿಯಲ್ಲಿದ್ದರೆ, 32 ಮಿಶ್ರ ವಿಭಾಗಕ್ಕೆ ಒಳಪಡುತ್ತವೆ. 120 ಜಲಾನಯನ ಪ್ರದೇಶಗಳು ಸುರಕ್ಷಿತವಾಗಿವೆ ಎಂದರು.

ಒಟ್ಟು 105 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ತೃಪ್ತಿಕರವಾಗಿಲ್ಲ. ಶೇ 70ರಷ್ಟು ನೀರು ತೆಗೆದರೆ ಸುರಕ್ಷಿತವೆಂದು, ಅದಕ್ಕಿಂತ ಹೆಚ್ಚಾಗಿ ತೆಗೆದರೆ ಅಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಅಸುರಕ್ಷಿತ ಪ್ರದೇಶಗಳ ವ್ಯಾಪ್ತಿಯ ಅಂತರ್ಜಲದಲ್ಲಿ ವಿಷಕಾರಿ ಅಂಶಗಳಿರುವುದು ಗೊತ್ತಾಗಿದೆ ಎಂದು ತಿಳಿಸಿದರು.

ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ 1,500 ಕೋಟಿ ರೂಪಾಯಿ ವೆಚ್ಚದ ಸಮಗ್ರ ಯೋಜನೆ ರೂಪಿಸಲಾಗಿದೆ. 2600 ಹೊಸ ಬಾಂದಾರು, ಬ್ಯಾರೇಜ್, ಕೆರೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಪ್ರತಿ ವರ್ಷ 500 ಕೋಟಿ ರೂ. ವೆಚ್ಚ ಮಾಡಿದರೆ ಮೂರು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಬಹುದಾಗಿದೆ. ಬಜೆಟ್ನಲ್ಲಿ ಹಣ ನೀಡುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 36 ಸಾವಿರ ಕೆರೆಗಳಿದ್ದು, ಅವುಗಳೆಲ್ಲವನ್ನೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಟ್ಯಾಂಕರ್ ಮೂಲಕ ನೀರು: ಸಣ್ಣ ನೀರಾವರಿ ಇಲಾಖೆಯಡಿ ಪ್ರಸ್ತುತ 3479 ಕೆರೆಗಳಿದ್ದು, 4,12,868 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಮುಂಗಾರಿನಲ್ಲಿ ಮಳೆಯಾಗದ ಕಾರಣ 1,332 ಕೆರೆಗಳಿಗೆ ಒಂದು ಹನಿ ನೀರೂ ಬಂದಿಲ್ಲ. 1,160 ಕೆರೆಗಳಲ್ಲಿ ಶೇ 30ರಷ್ಟು, 494 ಕೆರೆಗಳಲ್ಲಿ ಶೇ 31ರಿಂದ 50ರಷ್ಟು, 437 ಕೆರೆಗಳಲ್ಲಿ ಶೇ 51ರಿಂದ 99ರಷ್ಟು ನೀರು ಸಂಗ್ರಹವಾಗಿತ್ತು. ಕೇವಲ 56 ಕೆರೆಗಳು ಮಾತ್ರ ಪೂರ್ಣವಾಗಿ ಭರ್ತಿಯಾಗಿದ್ದವು ಎಂದು ವಿವರಿಸಿದರು.

ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅನಿವಾರ್ಯವಾಗಿದೆ. ಹೊಸ ಕೊಳವೆಬಾವಿ ಕೊರೆದರೂ 2-3 ದಿನಗಳಲ್ಲಿ ನಿಂತು ಹೋಗುತ್ತದೆ. ಆದ್ದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸದೆ ಬೇರೆ ಮಾರ್ಗವಿಲ್ಲ ಎಂದರು.

ಕೆರೆ ಒತ್ತುವರಿ: 2258 ಕೆರೆಗಳ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 5995 ಹೆಕ್ಟೇರ್ ಭೂಮಿಯನ್ನು ತೆರವುಗೊಳಿಸಲಾಗಿದೆ. ಉಳಿದ ಕೆರೆಗಳ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.