ಬೆಂಗಳೂರು: ಬೆಂಗಳೂರು–ಮೈಸೂರು ನಡುವೆ ಪರಿಚಯಿಸಿದ ಎಲೆಕ್ಟ್ರಿಕ್ ಬಸ್ (ಇ.ವಿ) ಸಂಚಾರ ಯಶಸ್ವಿಯಾದ ಬೆನ್ನಲ್ಲೆ, ಮತ್ತೆ 50 ಇ.ವಿ ಬಸ್‌ಗಳನ್ನು ತರಿಸಿಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮುಂದಾಗಿದೆ.
‘ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್ –2 ಯೋಜನೆ’ ಅಡಿ ಡಿ.31ರಂದು ಮೊದಲ ಬಸ್‌ಗೆ ನಿಗಮ ಹಸಿರು ನಿಶಾನೆ ತೋರಿಸಿತ್ತು. ಜನವರಿ ಎರಡನೇ ವಾರದಲ್ಲಿ ಎರಡೂ ನಗರಗಳ ನಡುವೆ ಪ್ರಾಯೋಗಿಕವಾಗಿ ಸಂಚಾರ ಆರಂಭಿಸಿದ್ದ ‘ಪವರ್ ಪ್ಲಸ್’ ಹೆಸರಿನ ಬಸ್‌ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.
‘ಬಸ್‌ನ ವೇಗ, ಬ್ಯಾಟರಿ ಕಾರ್ಯಕ್ಷಮತೆ ಸೇರಿದಂತೆ ಇ.ವಿ ಬಸ್ ತಾಂತ್ರಿಕತೆಯನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಎಲ್ಲ ವಿಭಾಗದಲ್ಲೂ ಕಾರ್ಯಕ್ಷಮತೆ ತೃಪ್ತಿ ನೀಡಿದೆ. ನಿಗಮ ವ್ಯಾಪ್ತಿಯ ಇತರೆ ಜಿಲ್ಲೆಗಳಿಗೂ ಮಾರ್ಚ್ ಅಂತ್ಯದ ವೇಳೆಗೆ ‘ಪವರ್ ಪ್ಲಸ್’ ಬಸ್ ಸಂಚರಿಸಲಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಾರ್ಚ್‌ನಲ್ಲಿ ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿಗೆ ಇ.ವಿ ಬಸ್‌ಗಳು ಸಂಚರಿಸಲಿವೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಚಾರ್ಜಿಂಗ್ ಕೇಂದ್ರ’ ನಿರ್ಮಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆಯಲ್ಲೂ ಚಾರ್ಜಿಂಗ್ ಕೇಂದ್ರದ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣವಾಗಿದೆ’ ಎಂದೂ ಮಾಹಿತಿ ನೀಡಿದರು.
300 ಕಿ.ಮೀ ಪ್ರಯಾಣ: ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ನಿಗಮವು ಇ.ವಿ ಬಸ್‌ಗೆ ಹೆಚ್ಚಿನ
ಆದ್ಯತೆ ನೀಡುತ್ತಿದೆ. ‘ಪವರ್ ಪ್ಲಸ್’ ಬಸ್‌ಗೆ ಒಮ್ಮೆ ರೀಚಾರ್ಜ್ ಮಾಡಿದರೆ, 300 ಕಿ.ಮೀ ಪ್ರಯಾಣಿಸಬಹುದಾಗಿದೆ. ವೇಗವಾಗಿ ರೀಚಾರ್ಜ್ ಆಗುತ್ತಿದೆ. ಎಂದು ಅಧಿಕಾರಿಗಳು ಹೇಳಿದರು.
ಒಲೆಕ್ಟಾ ಕಂಪನಿ ಅಭಿವೃದ್ಧಿಪಡಿಸಿ ನೀಡಲಿರುವ 50 ಬಸ್‌ಗಳಲ್ಲೂ ಆರಾಮದಾಯಕ ಪುಶ್‌ಬ್ಯಾಕ್ ಆಸನ, ಗುಡ್ಡಗಾಡು ಹಾಗೂ ಬಯಲುಪ್ರದೇಶಗಳಲ್ಲಿ ಸುಗಮ ಸಂಚಾರ ಸಾಮರ್ಥ್ಯ, 43 ಆಸನದ ವ್ಯವಸ್ಥೆ, ಪ್ರಯಾಣಿಕರ ಬಳಕೆಗೆ ವೈ–ಫೈ ಮತ್ತು ಪ್ರತಿ ಆಸನಕ್ಕೂ ಯುಎಸ್‌ಬಿಚಾರ್ಜರ್, ಸಿಸಿಟಿವಿ ಕ್ಯಾಮೆರಾ, ತುರ್ತು ಬಟನ್ ಸೇರಿದಂತೆ ಸುರಕ್ಷತಾ
ಕ್ರಮಗಳು ಇರಲಿವೆ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.