ಬೆಂಗಳೂರು: ಕದ್ದ ವಸ್ತುಗಳನ್ನು ಮಾರುತ್ತಿದ್ದ ಕಮ್ಮನಹಳ್ಳಿಯ ಸಯ್ಯದ್ ಬಲ್ಲಿ ನೆಹರಿ (35) ಎಂಬಾತನನ್ನು ಹಿಡಿದ ಅಂಗಡಿ ಮಾಲೀಕರು, ಆತನನ್ನು ಕೊತ್ತನೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆತನಿಂದ ₹45,000 ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಗ್ರಾಹಕರ ಸೋಗಿನಲ್ಲಿ ಡೆಕಥ್ಲಾನ್ ಸ್ಪೋರ್ಟ್ಸ್ ಮಳಿಗೆಗೆ ಮಂಗಳವಾರ ಮಧ್ಯಾಹ್ನ ಹೋಗಿದ್ದ ಆತ ಕೆಲ ವಸ್ತುಗಳನ್ನು ಕವರ್‌ಗೆ ಹಾಕಿಕೊಂಡಿದ್ದ. ಬಳಿಕ ಬಿಲ್ ಕೊಡದೆ ಸಿಬ್ಬಂದಿಯ ಕಣ್ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.

ಆ ಬಳಿಕ ಪಕ್ಕದ ಮಾರುಕಟ್ಟೆಯ ಅಂಗಡಿಯಲ್ಲೂ ಕಳ್ಳತನ ಮಾಡಿದ್ದ ಆತ ಅವುಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದ. ಆ ಬಗ್ಗೆ ಅನುಮಾನಗೊಂಡ ಮಾಲೀಕ, ತನ್ನ ಅಂಗಡಿಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಕಳವು ಮಾಡಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಹಿಡಿದಿದ್ದರು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.