ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಶೇ 70ರಷ್ಟು ಮತದಾನ

Last Updated 27 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಜಿಲ್ಲೆಯ ಮೂರು ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಚುನಾವಣೆ‌ ಶಾಂತಿಯುತವಾಗಿ ನಡೆದಿದ್ದು, ಶೇ 70.55ರಷ್ಟು ಮತದಾನ ನಡೆದಿದೆ.

ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಶೇ 68.13, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಶೇ 73.27 ಹಾಗೂ ಆನೇಕಲ್ ತಾಲ್ಲೂಕಿನಲ್ಲಿ ಶೇ 70.25ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮೂರು ತಾಲ್ಲೂಕಿನ 1,376 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 3,368 ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಸಂಜೆ ವೇಳೆಗೇ ಮತದಾನ ಮುಗಿದರೆ ಆನೆಕಲ್ ತಾಲ್ಲೂಕಿನಲ್ಲಿ ರಾತ್ರಿ 8ರ ತನಕ ಮತದಾನ ನಡೆಯಿತು.

ಇಟ್ಟಿಗೆ ಕಾರ್ಖಾನೆ, ಕೃಷಿ ಚಟುವಟಿಕೆ, ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲ ಮತಗಟ್ಟೆಗಳಿಗೆ ಸಂಜೆ ವೇಳೆಗೆ ಬಂದರು. ಸಂಜೆ 5 ಗಂಟೆಯಷ್ಟರಲ್ಲಿ ಮತಗಟ್ಟೆ ಆವರಣಕ್ಕೆ ಬಂದವರಿಗೆ ಟೋಕನ್ ವಿತರಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಅಹಿಕರ ಘಟನೆಗಳಿಲ್ಲದೆ ಶಾಂತಿಯುತ ಮತದಾನ ನಡೆದಿದೆ. ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.

ಮತದಾನ ತಡವಾದ ಮತಗಟ್ಟೆಗಳಿಂದ ಮತಪೆಟ್ಟಿಗೆಗಳು ಸುರಕ್ಷಿತವಾಗಿ ಡಿ–ಮಸ್ಟರಿಂಗ್ ಕೇಂದ್ರ ತಲುಪಲು ಪೊಲೀಸ್‌ ಕಾವಲು ಇದ್ದರೂ, ಆಯಾ ವ್ಯಾಪ್ತಿಯ ಠಾಣೆ ಸಿಬ್ಬಂದಿ ಮತಪೆಟ್ಟಿಗೆ ಕೊಂಡೊಯ್ಯುವ ವಾಹನಗಳಿಗೆ ಭದ್ರತೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT