ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ನಕ್ಷೆ ಉಲ್ಲಂಘಿಸಿದ 80 ಕಟ್ಟಡ ತೆರವು

Published 13 ಜುಲೈ 2023, 13:58 IST
Last Updated 13 ಜುಲೈ 2023, 13:58 IST
ಅಕ್ಷರ ಗಾತ್ರ

ಬೆಂಗಳೂರು: ಬನಶಂಕರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅನುಮೋದಿತ ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗಿರುವ ಸುಮಾರು 80 ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ದಕ್ಷಿಣ ವಲಯದಲ್ಲಿ ನಕ್ಷೆ ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಬಂದಿದ್ದವು. ಈ ದೂರುಗಳನ್ನು ಆಧರಿಸಿ ವಿಚಾರಣೆ ನಡೆಸಿರುವ ನಗರ ಯೋಜನಾ ಅಧಿಕಾರಿಗಳು, ಅಕ್ರಮವಾಗಿ ಕಟ್ಟಿರುವುದನ್ನು ದಾಖಲೆ ಸಹಿತ ಸಾಬೀತುಪಡಿಸಿದ್ದಾರೆ.

ದೂರು ಹಾಗೂ ಅಧಿಕಾರಿಗಳ ಸ್ಥಳಪರಿಶೀಲನೆಯನ್ನು ವಿಚಾರಣೆ ನಡೆಸಲಾಗಿದ್ದು, ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳ ತೆರವಿಗೆ ಆದೇಶ ಹೊರಡಿಸಲಾಗಿದೆ. ಹೀಗಾಗಿ, ಬನಶಂಕರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಅಕ್ರಮ ಕಟ್ಟಡಗಳಿಗೆ ಗುರುತು ಮಾಡಲಾಗಿದೆ.

ಕಟ್ಟಡಗಳ ಮೇಲೆ ಎಷ್ಟು ಅಕ್ರಮ ಅಥವಾ ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಕೆಂಪು ಬಣ್ಣದಿಂದ ಬರೆಯಲಾಗಿದೆ. ಈ ವಾರಾಂತ್ಯಕ್ಕೆ ಗುರುತು ಮಾಡುವ ಕಾರ್ಯ ಮುಗಿಯಲಿದ್ದು, ಮುಂದಿನ ವಾರದಿಂದ ತೆರವು ಕಾರ್ಯ ಆರಂಭವಾಗಲಿದೆ ಎಂದು ಬೆಂಗಳೂರು ದಕ್ಷಿಣ ವಲಯದ ಆಯುಕ್ತ ಜಯರಾಂ ರಾಯಪುರ ತಿಳಿಸಿದರು.

ಮಾಹಿತಿ ನೀಡಿದರೆ ಕ್ರಮ: ಸಾರ್ವಜನಿಕರ ದೂರು ಆಧರಿಸಿ, ವಿಚಾರಣೆ ನಡೆಸಿ ಈಗ ತೆರವು ಕಾರ್ಯಕ್ಕೆ ಮುಂದಾಗಿದ್ದೇವೆ. ಈ ರೀತಿ ಇನ್ನೂ ಹಲವು ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿರಬಹುದು. ನಾಗರಿಕರು ದೂರು ನೀಡಿದರೆ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಯರಾಂ ಹೇಳಿದರು.

ನಕ್ಷೆ ಉಲ್ಲಂಘಿಸಿ ನಿರ್ಮಿಲಾಗಿರುವ ಕಟ್ಟಡಗಳ ಮೇಲೆ ಕೆಂಪು ಬಣ್ಣದಿಂದ ಅಕ್ರಮದ ಮಾಹಿತಿ ಬರೆಯುತ್ತಿರುವ ಬಿಬಿಎಂಪಿ ಸಿಬ್ಬಂದಿ
ನಕ್ಷೆ ಉಲ್ಲಂಘಿಸಿ ನಿರ್ಮಿಲಾಗಿರುವ ಕಟ್ಟಡಗಳ ಮೇಲೆ ಕೆಂಪು ಬಣ್ಣದಿಂದ ಅಕ್ರಮದ ಮಾಹಿತಿ ಬರೆಯುತ್ತಿರುವ ಬಿಬಿಎಂಪಿ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT