ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 25 ವಿಧಾನಸಭೆ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದ್ದು, 82 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಕರಡು ಪಟ್ಟಿಗೆ ಹೋಲಿಸಿದರೆ, 80 ಸಾವಿರ ಮತದಾರರು ಹೆಚ್ಚಾಗಿದ್ದಾರೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023ರ ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗುರುವಾರ ಪ್ರಕಟಿಸಿದರು. ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿ ಶೇ 100ರಷ್ಟು ಪರಿಷ್ಕರಣೆಯಾಗುತ್ತಿರುವುದರಿಂದ ಅದು ಜ.15ರಂದು ಪ್ರಕಟವಾಗಲಿದೆ.

25 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 82,29,375 ಮತದಾರರಿದ್ದಾರೆ. ಅದರಲ್ಲಿ 42,65,140 ಪುರುಷರು, 39,62,712 ಮಹಿಳೆಯರಿದ್ದಾರೆ. 80 ಸಾವಿರ ಯುವಜನರಿದ್ದರೂ 18ರಿಂದ 19 ವರ್ಷದೊಳಗಿನವರಲ್ಲಿ 48,542 ಜನ ಮಾತ್ರ ಮತಪಟ್ಟಿಯಲ್ಲಿದ್ದಾರೆ. ಮಾರ್ಚ್‌ನಲ್ಲಿ 18 ವರ್ಷ ತುಂಬುವವರು ಕೂಡ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.

1.5 ಲಕ್ಷ ಅಂಗವಿಕಲರ ಪೈಕಿ 34,941 ಮಂದಿ ಪಟ್ಟಿಯಲ್ಲಿದ್ದು, ಪ್ರತಿ ವಾರ್ಡ್‌ನಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆಯ ವತಿಯಿಂದ ನೋಡಲ್ ಅಧಿಕಾರಿಯನ್ನು ನೇಮಿಸಿ ಉಳಿದವರನ್ನು ಪಟ್ಟಿಗೆ ಸೇರಿಸಲು ಅಭಿಯಾನ ನಡೆಸಲಾಗುತ್ತದೆ. 9,182 ಲಿಂಗತ್ವ ಅಲ್ಪಸಂಖ್ಯಾತರ ಪೈಕಿ 9,085 ಮಂದಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಉಳಿದವರನ್ನು ಸೇರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಭಿಯಾನ ನಡೆಸಲಾಗುತ್ತದೆ. ಶಾಲೆ–ಕಾಲೇಜು ಸೇರಿ 2,929 ಚುನಾವಣಾ ಸಾಕ್ಷರತಾ ಕ್ಲಬ್‌ಗಳನ್ನು ಸ್ಥಾಪಿಸಲಾಗಿದ್ದು, ಜಾಗೃತಿ ಮೂಡಿಸಲಾಗುತ್ತಿದೆ. 7,721 ಮತಗಟ್ಟೆಗಳಿವೆ. ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಶೇ 55.47ರಷ್ಟು ಮಾತ್ರ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಅಂತಿಮ ಮತದಾರರ ಪಟ್ಟಿ ವೆಬ್‌ಸೈಟ್ http://www.ceokarnataka.kar.nic.in ಮತ್ತು www.bbmp.gov.in ನಲ್ಲಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿ ನಿರಂತರ ಪರಿಷ್ಕರಣೆಯಲ್ಲಿರಲಿದ್ದು, ಸೇರ್ಪಡೆ ತಿದ್ದುಪಡಿ, ಸ್ಥಳಾಂತರ ಹಾಗೂ ಮತದಾರರ ಪಟ್ಟಿಯಿಂದ ತೆಗೆದುಹಾಕುವಿಕೆ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಈ ಪೈಕಿ ಮೊಬೈಲ್ ತಂತ್ರಾಂಶ ವೋಟರ್ ಹೆಲ್ಪ್‌ಲೈನ್ ಆ್ಯಪ್, ಪೋರ್ಟಲ್ www.nvsp.in, 1950 ಸಹಾಯವಾಣಿ, www.voterportal.eci.gov.in ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.

25 ವಿಧಾನಸಭೆ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ಮತದಾರರಿದ್ದು, ರಾಜಾಜಿನಗರದಲ್ಲಿ ಅತಿ ಕಡಿಮೆ ಮತದಾರರಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಕರಡು ಪಟ್ಟಿಯಲ್ಲಿ ಇದ್ದುದಕ್ಕಿಂತ ಅತಿ ಹೆಚ್ಚು (9,066) ಮತದಾರರು ಸೇರ್ಪಡೆಯಾಗಿದ್ದಾರೆ.

ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್, ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ದಯಾನಂದ್, ಡಾ. ಹರೀಶ್ ಕುಮಾರ್, ಜಗದೀಶ್ ನಾಯ್ಕ್, ವೆಂಕಟಾಚಲಪತಿ, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಉಮೇಶ್ ಇದ್ದರು.

25 ವಿಧಾನಸಭೆ ಕ್ಷೇತ್ರಗಳ ಮತದಾರರ ವಿವರ

ಜ.5, 2023;82,29,375

ನ.9, 2022 (ಕರಡು);81,48,989

ಜ.13, 2022;84,94,461

ಮತದಾರರ ವಿವರ

ಕ್ಷೇತ್ರ;ಮತದಾರರು

ರಾಜರಾಜೇಶ್ವರಿನಗರ;4,62,423

ಶಾಂತಿನಗರ;2,12,740

ಗಾಂಧಿನಗರ;2,19,934

ರಾಜಾಜಿನಗರ;2,01,287

ಚಾಮರಾಜಪೇಟೆ;2,20,337

ಕೆ.ಆರ್.ಪುರ;4,87,546

ಮಹಾಲಕ್ಷ್ಮಿ ಲೇಔಟ್;2,77,043

ಮಲ್ಲೇಶ್ವರ;2,16,774

ಹೆಬ್ಬಾಳ;2,69,609

ಪುಲಕೇಶಿನಗರ;2,32,154

ಸರ್ವಜ್ಞನಗರ;3,52,977

ಸಿ.ವಿ.ರಾಮನ್‌ನಗರ;2,63,367

ಗೋವಿಂದರಾಜನಗರ;2,81,098

ವಿಜಯನಗರ;2,90,082

ಬಸವನಗುಡಿ;2,21,654

ಪದ್ಮನಾಭನಗರ;2,69,297

ಬಿಟಿಎಂ ಲೇಔಟ್;2,64,553

ಜಯನಗರ;2,01,625

ಬೊಮ್ಮನಹಳ್ಳಿ;4,32,752

ಯಲಹಂಕ;4,07,217

ಬ್ಯಾಟರಾಯನಪುರ;4,69,806

ಯಶವಂತಪುರ;5,15,716

ದಾಸರಹಳ್ಳಿ;4,32,751

ಬೆಂಗಳೂರು ದಕ್ಷಿಣ;6,50,532

ಆನೇಕಲ್;3,76,101

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.