ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಆಟೊ ಚಾಲಕರ ವಿರುದ್ಧ 833 ಪ್ರಕರಣ ದಾಖಲು

ನಿಯಮ ಉಲ್ಲಂಘನೆ ಆರೋಪ: ಸಂಚಾರ ಪೊಲೀಸರ ಕಾರ್ಯಾಚರಣೆ
Published 22 ಜೂನ್ 2024, 14:41 IST
Last Updated 22 ಜೂನ್ 2024, 14:41 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಆಟೊ ಚಾಲಕರ ವಿರುದ್ಧ 833ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ಸಂಚಾರ ಪೊಲೀಸರು ದಾಖಲಿಸಿದ್ದಾರೆ.

‘ಚಾಲನ ಪರವಾನಗಿ ಪತ್ರವಿಲ್ಲದೇ ವಾಹನ ಚಾಲನೆ ಮಾಡುವವರ ವಿರುದ್ಧ ಮೂರು ಪ್ರಕರಣ ದಾಖಲು ಮಾಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಪಡೆಯುವವರ ವಿರುದ್ಧ 213 ಪ್ರಕರಣ ದಾಖಲಿಸಲಾಗಿದೆ. ಬಾಡಿಗೆಗೆ ಹೋಗಲು ನಿರಾಕರಣೆ ಮಾಡಿದವರ ವಿರುದ್ಧ 234 ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ 383 ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

‘ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸಲು ಕಾರಣವಾಗುತ್ತಿವೆ. ಪರವಾನಗಿ ಪತ್ರ ಹೊಂದಿಲ್ಲದೇ ಆಟೊ ಚಾಲನೆ ಮಾಡುತ್ತಿರುವುದು, ಹೆಚ್ಚಿನ ದರ ಕೇಳುತ್ತಿರುವುದು ಹಾಗೂ ಪ್ರಯಾಣಿಕರು ಕೇಳಿದ ಸ್ಥಳಕ್ಕೆ ಬಾರದಿರುವ ಸಂಬಂಧ ದೂರುಗಳು ಬಂದಿದ್ದವು. ದೂರು ಬಂದ ಕಾರಣ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT