ಬೆಂಗಳೂರು: ಹತ್ತು ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಖಾಸಗಿ ಶಾಲೆಯೊಂದರ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್ (65) ಅವರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಪುಷ್ಪರಾಜ್, ಸ್ವಂತ ಶಾಲೆ ನಡೆಸುತ್ತಿದ್ದಾನೆ. ಆತನೇ ಶಾಲೆಯ ಪ್ರಾಂಶುಪಾಲನಾಗಿದ್ದಾನೆ. ಸಂತ್ರಸ್ತ ಬಾಲಕಿಯ ಪೋಷಕರು ನೀಡಿರುವ ದೂರು ಆಧರಿಸಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಾಂಶುಪಾಲನನ್ನು ಬಂಧಿಸಲಾಗಿದೆ. ಬಾಲಕಿ ಹಾಗೂ ಆರೋಪಿಯನ್ನು ಪ್ರತ್ಯೇಕವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಬರಬೇಕಿದೆ’ ಎಂದು ತಿಳಿಸಿದರು.

ಮನೆಗೆ ಕರೆದೊಯ್ದು ಕೃತ್ಯ: ‘ಶಾಲೆ ಆವರಣದಲ್ಲಿಯೇ ಆರೋಪಿ ಪುಷ್ಪರಾಜ್ ಮನೆ ಇದೆ. ಅದೇ ಮನೆಗೆ ವಿದ್ಯಾರ್ಥಿನಿಯನ್ನು ಕರೆದೊಯ್ದು ಆರೋಪಿ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ವಿದ್ಯಾರ್ಥಿನಿ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಎಂದಿನಂತೆ ಶಾಲೆಗೆ ಬಂದಿದ್ದಳು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಶಾಲೆಯ ತರಗತಿ ಕೊಠಡಿಯಲ್ಲಿ ಬಾಲಕಿ ಒಂಟಿಯಾಗಿ ಕುಳಿತಿದ್ದಳು. ಇತರೆ ಮಕ್ಕಳು ಆಟವಾಡಲು ಮೈದಾನಕ್ಕೆ ಹೋಗಿದ್ದರು.’

‘ಬಾಲಕಿಯನ್ನು ಗಮನಿಸಿದ್ದ ಆರೋಪಿ, ಆಕೆಯ ಬಳಿ ಹೋಗಿದ್ದ. ‘ನನ್ನ ಜೊತೆ ಬಾ. ನಿನಗೆ ಕೇಕ್ ಕೊಡುತ್ತೇನೆ’ ಎಂದು ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದ. ಇದೇ ಸಂದರ್ಭದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನೆಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕೃತ್ಯದ ಬಳಿಕ ಆರೋಪಿ, ಬಾಲಕಿಗೆ ಕೇಕ್ ಕೊಟ್ಟು ಮನೆಯಿಂದ ಹೊರಗೆ ಕಳುಹಿಸಿದ್ದ. ಸಂಜೆ 4.30 ಸುಮಾರಿಗೆ ಎಂದಿನಂತೆ ಮನೆಗೆ ಹೋಗಿದ್ದ ಬಾಲಕಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಜೊತೆಗೆ, ಒಳ ಉಡುಪಿನಲ್ಲಿ ರಕ್ತಸ್ರಾವವಾಗಿತ್ತು. ಅದನ್ನು ಗಮನಿಸಿದ್ದ ತಾಯಿ, ಆಸ್ಪತ್ರೆಗೆ ಕರೆದೊಯ್ದಿದ್ದರು.’

‘ತಪಾಸಣೆ ನಡೆಸಿದ ವೈದ್ಯರು, ಅತ್ಯಾಚಾರವಾಗಿರುವುದಾಗಿ ತಿಳಿಸಿದ್ದರು. ನಂತರವೇ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ. ಬಾಲಕಿ ಸಹ ಅತ್ಯಾಚಾರದ ಬಗ್ಗೆ ಹೇಳಿಕೆ ನೀಡಿದ್ದಾಳೆ’ ಎಂದು ಪೊಲೀಸರು ಹೇಳಿದರು.

ಪೋಷಕರು ದೂರು ನೀಡುತ್ತಿದ್ದಂತೆ ಪುರಾವೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಹಿನ್ನೆಲೆ ಹಾಗೂ ಈತನ ಕೃತ್ಯದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.
–ಎಸ್. ಗಿರೀಶ್, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.