ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು:‘ಸಾಯಿಸ್ತಾರೆ ನನ್ನ’- ಪೊಲೀಸ್ ವಿರುದ್ಧ ಯುವಕನ ಫೋಸ್ಟ್

Last Updated 13 ಡಿಸೆಂಬರ್ 2022, 4:16 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಯಿಸ್ತಾರೆ ನನ್ನ. ದಯವಿಟ್ಟು ನ್ಯಾಯ ಕೊಡ್ಸಿ’ ಎಂದು ರಾಜರಾಜೇಶ್ವರಿನಗರ ಠಾಣೆ ಪೊಲೀಸರ ವಿರುದ್ಧ ನಂದೀಶ್ ಕೊಡಗು ಎಂಬುವವರು ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದಂಪತಿಯನ್ನು ಅಡ್ಡಗಟ್ಟಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ₹ 1 ಸಾವಿರ ಸುಲಿಗೆ ಮಾಡಿದ್ದ ಆರೋಪದ ಬೆನ್ನಲ್ಲೇ ಮತ್ತೊಂದು ಆರೋಪ ಕೇಳಿಬಂದಿದೆ.

ಆರೋಪ ಅಲ್ಲಗೆಳೆದಿರುವ ಪೊಲೀಸರು, ‘ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ. ನಂದೀಶ್‌ಗೆ ಕಿರುಕುಳ ನೀಡಿಲ್ಲ’ ಎಂದಿದ್ದಾರೆ.

‘ಯುವತಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ಪ್ರಕರಣದಲ್ಲಿ ನಂದೀಶ್ ಬಂಧನವಾಗಿತ್ತು. ಕೆಲ ದಿನ ಜೈಲಿನಲ್ಲಿದ್ದ ಈತ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಇದೀಗ ಆರೋಪ ಮಾಡುತ್ತಿದ್ದಾನೆ’ ಎಂದೂ ಪೊಲೀಸರು ಹೇಳಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ: ‘ನನ್ನ ಮೊಬೈಲ್ ಅಕ್ರಮವಾಗಿ ಇಟ್ಟುಕೊಂಡಿರುವ (ರಾಜರಾಜೇಶ್ವರಿನಗರದಲ್ಲಿ ಈ ಹಿಂದೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖ ಲಿಸಿ ದಂಡಿಸಿದ್ದ ಪೊಲೀಸ್‌) ನವೀನ್‌ ಹಾಗೂ ಯದುಕುಮಾರ್ ನನ್ನ ಸಾವಿಗೆ ಕಾರಣ’ ಎಂದು ಪೋಸ್ಟ್‌ನಲ್ಲಿ ನಂದೀಶ್ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT