ಗುರುವಾರ , ಜುಲೈ 16, 2020
22 °C

ಸಿಗರೇಟ್‌ ಲಂಚ ಪ್ರಕರಣ: ಮುಂದುವರಿದ ಪ್ರಭುಶಂಕರ್‌ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಗರೇಟ್‌ ಮತ್ತು ಮಾಸ್ಕ್‌ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಸಿಬಿಯ ಆರ್ಥಿಕ ಅಪರಾಧಗಳ ತಡೆ ವಿಭಾಗದ ಎಸಿಪಿ ಪ್ರಭುಶಂಕರ್‌ ಸೋಮವಾರವೂ ಎಸಿಬಿ ತನಿಖಾ ಅಧಿಕಾರಿಗಳ ಮುಂದೆ ಹಾಜರಾದರು.

‘ಪ್ರಭುಶಂಕರ್‌ ಶುಕ್ರವಾರ ದಿಂದ ವಿಚಾರಣೆಗೆ ಹಾಜರಾಗುತ್ತಿದ್ದರೂ ತನಿಖಾಧಿಕಾರಿಗಳ ಜತೆ ಸರಿಯಾಗಿ ಸಹಕರಿಸುತ್ತಿಲ್ಲ. ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿರುವ ಅವರನ್ನು ನಾವೂ ಒತ್ತಾಯಪೂರ್ವಕವಾಗಿ ಪ್ರಶ್ನಿಸಲು ಆಗುತ್ತಿಲ್ಲ’ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ನಲ್ಲಿ ದುಬಾರಿ ಬೆಲೆಗೆ ಸಿಗರೇಟ್‌ ಮಾರಾಟ ಮಾಡಲು ಅವಕಾಶ ಕೊಡಲು ವಿತರಕರಿಂದ ಲಂಚ ಪಡೆದ ಆರೋಪಕ್ಕೆ ಎಸಿಪಿ ಒಳಗಾಗಿದ್ದಾರೆ. ಎನ್‌– 95 ನಕಲಿ ಮಾಸ್ಕ್‌ ತಯಾರಿಸುತ್ತಿದ್ದ ಆರೋಪಿಯೊಬ್ಬರಿಗೆ ರಕ್ಷಣೆ ನೀಡಲು ಲಂಚ ಪಡೆದ ಆರೋಪವೂ ಇವರ ಮೇಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು