ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟೇಶದಾಸ, ವಿಶಾಖಾ ಹರಿಗೆ ಅಚ್ಯುತಶ್ರೀ ಪ್ರಶಸ್ತಿ

Last Updated 24 ಆಗಸ್ಟ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ಷಡ್ಜ ಕಲಾ ಕೇಂದ್ರ ಹಾಗೂ ಭಾರತೀಯ ವಿದ್ಯಾಭವನದ ವತಿಯಿಂದ ನೀಡಲಾಗುವ ಅಚ್ಯುತಶ್ರೀ ಪ್ರಶಸ್ತಿಗೆ ರಾಜ್ಯದ ದೇ.ಸು. ವೆಂಕಟೇಶದಾಸ ಹಾಗೂ ತಮಿಳುನಾಡಿನ ವಿದುಷಿ ವಿಶಾಖಾ ಹರಿ ಆಯ್ಕೆಯಾಗಿದ್ದಾರೆ.

ಪ್ರತಿವರ್ಷ ಹರಿಕಥಾ ಕ್ಷೇತ್ರದ ಸಾಧಕರಿಗೆ ಅಚ್ಯುತಶ್ರೀ ರಾಷ್ಟ್ರೀಯ ನೀಡಲಾಗುತ್ತದೆ. ಭಾರತೀಯ ವಿದ್ಯಾಭವನದಲ್ಲಿ ಸೆ.3ರಂದು ಆಯೋಜಿಸಲಾಗಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬೆಂಗಳೂರಿನ ರಾಮಕೃಷ್ಣ ಮಿಷನ್‌ನ ಸ್ವಾಮಿ ಮಂಗಲನಾಥಾನಂದಜೀ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ ಭಾಗವಹಿಸಲಿದ್ದಾರೆ ಎಂದು ಷಡ್ಜ ಕಲಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಡಾ. ದತ್ತಾತ್ರೇಯ ಎಲ್. ವೇಲಣಕರ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ದತ್ತಾತ್ರೇಯ ಎಲ್. ವೇಲಣಕರ್ ರಚಿಸಿರುವ ‘ದ ಸ್ಪ್ಲೆಂಡರ್ ಆಫ್ ಕಥಾಕೀರ್ತನ’ ಗ್ರಂಥ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT