ಶನಿವಾರ, ಮೇ 28, 2022
27 °C

ಸ್ವಾಮೀಜಿ ವೇಷದಲ್ಲಿದ್ದ ಆ್ಯಸಿಡ್‌ ದಾಳಿಕೋರ: ಭಕ್ತರ ವೇಷದಲ್ಲಿ ಪೊಲೀಸರಿಂದ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 24 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿದ್ದ ನಾಗೇಶ್, ತಮಿಳುನಾಡಿಗೆ ಹೋಗಿ ‘ರಮಣ’ ಆಶ್ರಮದಲ್ಲಿ ಸ್ವಾಮೀಜಿ ಆಗಿ ವೇಷ ಬದಲಿಸಿಕೊಂಡಿದ್ದ. ಭಕ್ತರ ವೇಷದಲ್ಲಿ ಆಶ್ರಮಕ್ಕೆ ಹೋಗಿದ್ದ ಪೊಲೀಸರು, ನಾಗೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.

ಏಪ್ರಿಲ್ 28ರಂದು ಕೃತ್ಯ ಎಸಗಿ ಪರಾರಿಯಾಗಿದ್ದ ನಾಗೇಶ್, ತಮಿಳುನಾಡಿನ ಹಲವು ಊರುಗಳಲ್ಲಿ ಸುತ್ತಾಡಿದ್ದ. ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆಂಬುದನ್ನು ತಿಳಿದಿದ್ದ ನಾಗೇಶ್, ಆಶ್ರಮವೊಂದಕ್ಕೆ ಸೇರಿದ್ದ. ಸ್ವಾಮೀಜಿ ಆಗಿ ಬದಲಾಗಿದ್ದ ನಾಗೇಶ್‌ಗೆ ಭಕ್ತರ ಸಂಖ್ಯೆಯೂ ಹೆಚ್ಚಿತ್ತು.

ಪಶ್ಚಿಮ ವಿಭಾಗದ ಪೊಲೀಸರಿಗೆ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿತ್ತು. ‘ಆಶ್ರಮಕ್ಕೆ ನೇರವಾಗಿ ಹೋಗಿ ಸ್ವಾಮೀಜಿಯನ್ನು ಬಂಧಿಸಿದರೆ ಭಕ್ತರು ತರಾಟೆಗೆ ತೆಗೆದುಕೊಳ್ಳುತ್ತಾರೆ’ ಎಂಬುದನ್ನು ತಿಳಿದಿದ್ದ ಪೊಲೀಸರು, ಆರಂಭದಲ್ಲಿ ಭಕ್ತರ ವೇಷದಲ್ಲೇ ಆಶ್ರಮಕ್ಕೆ ಪ್ರವೇಶಿಸಿದ್ದರು. ಕೆಲದಿನ ನಾಗೇಶ್‌ ವರ್ತನೆ ಹಾಗೂ ಆತನ ಹಿನ್ನೆಲೆ ಬಗ್ಗೆ ತಿಳಿದುಕೊಂಡಿದ್ದರು. ನಾಗೇಶ್‌ ಎಂಬುದು ಖಾತ್ರಿಯಾಗುತ್ತಿದ್ದಂತೆ ತಮಿಳುನಾಡು ಪೊಲೀಸರ ಸಹಾಯದಿಂದ ಆತನನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು