ಗುರುವಾರ , ಡಿಸೆಂಬರ್ 3, 2020
18 °C

ತೃತೀಯ ಲಿಂಗಿಗಳ ಹಕ್ಕುಗಳಿಗೆ ವಿರುದ್ಧವಾದ ಕಾಯ್ದೆ: ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆ ಕಾಯ್ದೆಯಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಸೆಕ್ಷನ್‌ಗಳನ್ನು ಕೈಬಿಡುವಂತೆ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್ ನೀಡಿದೆ.

‘ವಿಮೋಚನಾ’, ‘ಒಂದೆಡೆ’ ಮತ್ತು ಇತರ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ನೋಟಿಸ್ ನೀಡಲು ಆದೇಶಿಸಿತು.

‘2019ರ ಕಾಯ್ದೆಯಲ್ಲಿನ ಸೆಕ್ಷನ್ 4ರ ಪ್ರಕಾರ, ವ್ಯಕ್ತಿ ಸ್ವಯಂ ಪ್ರೇರಿತವಾಗಿ ತಾನು ತೃತೀಯ ಲಿಂಗಿ, ಹೆಣ್ಣು ಅಥವಾ ಗಂಡು ಎಂದು ಘೋಷಿಸಿಕೊಳ್ಳಲು ಅವಕಾಶ ಇಲ್ಲ. ಸೆಕ್ಷನ್ 5, 6 ಮತ್ತು 7 ಪ್ರಕಾರ, ವೈದ್ಯಕೀಯ ಪ್ರಮಾಣ ಪತ್ರ ಆಧರಿಸಿ ಜಿಲ್ಲಾಧಿಕಾರಿ ಮೂಲಕ ತೃತೀಯ ಲಿಂಗಿ ಎಂಬ ಪ್ರಮಾಣ ಪತ್ರ ಪಡೆಯಬೇಕು. ಈ ಸೆಕ್ಷನ್‌ಗಳು ಸುಪ್ರೀಂ ಕೋರ್ಟ್ಆ ದೇಶದ ಉಲ್ಲಂಘನೆಯಾಗಿದೆ. ಯಾವ ಲಿಂಗ ಎಂಬುದನ್ನು ವ್ಯಕ್ತಿ ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ಇರಬೇಕು ಎಂದು ಕೋರ್ಟ್‌ ಹೇಳಿದೆ’ ಎಂದು ಅರ್ಜಿದಾರರು ವಿವರಿಸಿದ್ದಾರೆ.

‘ಮಹಿಳೆ ಮೇಲೆ ಅತ್ಯಾಚಾರ ನಡೆಸಿದವರಿಗೆ 7 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ತೃತೀಯ ಲಿಂಗಿಗಳ ಮೇಲೆ ಅತ್ಯಾಚಾರ ನಡೆಸಿದವರಿಗೆ 6 ತಿಂಗಳಿಂದ 2 ವರ್ಷಗಳ ತನಕ ಮಾತ್ರ ಜೈಲು ಶಿಕ್ಷೆ ಸಾಕು ಎಂದು ಸೆಕ್ಷನ್ 18
ಹೇಳುತ್ತಿದೆ. ಇದು ಸಂವಿಧಾನನೀಡಿರುವ ಸಮಾನತೆಗೆ ವಿರುದ್ಧವಾದ ಕಾಯ್ದೆ’ ಎಂಬುದು ಅರ್ಜಿದಾರರು ವಾದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.