ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರಿಗೆ ನಿವೃತ್ತ ನೌಕರರ ವೇತನ ಹೆಚ್ಚಳಕ್ಕೆ ಅನುಮೋದನೆ

Published 28 ಜೂನ್ 2024, 15:33 IST
Last Updated 28 ಜೂನ್ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನಿವೃತ್ತ ನೌಕರರಿಗೆ ಮೂಲವೇತನವನ್ನು ಶೇ 15ರಷ್ಟು ಹೆಚ್ಚಿಸಲು ಕ್ರಮ ವಹಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ವ್ಯತ್ಯಾಸದ ಮೊತ್ತವನ್ನು ನೀಡಲು ಲೆಕ್ಕಪತ್ರ ಇಲಾಖೆ ಅನುಮೋದನೆ ನೀಡಿದೆ.

ಸಾರಿಗೆ ನೌಕರರು 2019ರ ಡಿಸೆಂಬರ್‌ ಅಂತ್ಯದಲ್ಲಿ ಪಡೆಯುತ್ತಿದ್ದ ಮೂಲ ವೇತನವನ್ನು ಪರಿಷ್ಕರಿಸಿ ಶೇ 15 ರಷ್ಟು ಹೆಚ್ಚಿಸಲಾಗುವುದು. 2020ರಿಂದ 2023ರ ಫೆಬ್ರುವರಿ ಒಳಗೆ ನಿವೃತ್ತರಾದವರಿಗೆ ಉಪದಾನ, ನಿವೃತ್ತಿ ಗಳಿಕೆ ರಜೆ ನಗದೀಕರಣಕ್ಕೆ ಮಾತ್ರ ಇದು ಅನ್ವಯವಾಗಲಿದೆ ಎಂದು ಲೆಕ್ಕಪತ್ರ ಇಲಾಖೆಯು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

2020ರ ಜನವರಿಯಿಂದ 2023ರ ಫೆಬ್ರುವರಿ ನಡುವೆ ನಿವೃತ್ತರಾದ ಅಧಿಕಾರಿಗಳು ಮತ್ತು ನೌಕರರ ಪಟ್ಟಿಗಳನ್ನು ಆಗಸ್ಟ್‌ 31ರ ಒಳಗೆ ತಯಾರಿಸಬೇಕು. ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳ ವ್ಯತ್ಯಾಸದ ಕ್ಷೇಮ್‌ಗಳ ಪಾವತಿಯ ಕುರಿತು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಸಂಸ್ಥೆಗಳು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಿ 2024–25ನೇ ಸಾಲಿನಲ್ಲಿ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT