ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬರೀಶ್ ಸ್ಮಾರಕಕ್ಕೆ ಸರ್ಕಾರಿ ಜಾಗ, ಹಣ ಪಡೆದಿರುವುದು ವಿಪರ್ಯಾಸ: ನಟ ಚೇತನ್

Last Updated 30 ಮಾರ್ಚ್ 2023, 10:53 IST
ಅಕ್ಷರ ಗಾತ್ರ

ಬೆಂಗಳೂರು: ನಟ ದಿವಂಗತ ಅಂಬರೀಶ್ ಸ್ಮಾರಕಕ್ಕೆ ಸರ್ಕಾರಿ ಜಾಗ, ಹಣ ಪಡೆದಿರುವುದು ವಿಪರ್ಯಾಸ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಹೇಳಿದ್ದಾರೆ.

ಈ ಕುರಿತು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾರ್ಚ್ 28 ರಂದು ಟ್ವೀಟ್ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿಯೂ ಬರೆದುಕೊಂಡಿದ್ದಾರೆ.

ಅಂಬರೀಶ್ ಯಾರನ್ನೂ ಕೈಚಾಚಿದವರಲ್ಲ ಎಂದು ಸುಮಲತಾ ಅಂಬರೀಶ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಅಭಿಪ್ರಾಯ ಹಂಚಿಕೊಂಡು ಚೇತನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂಬರೀಶ್ ಸ್ಮಾರಕಕ್ಕೆ ಸುಮಲತಾ ಅಂಬರೀಶ್ ಅವರು ಅಂದಾಜು 2 ಎಕರೆ ಜಾಗ ಹಾಗೂ ₹12 ಕೋಟಿಯನ್ನು ಸರ್ಕಾರದಿಂದ ಕೈ ಚಾಚಿ ಪಡೆದಿರುವುದು ವಿಪರ್ಯಾಸವಾಗಿದೆ.

ತೆರಿಗೆದಾರರ ಹಣವನ್ನು ಖರ್ಚು ಮಾಡುವ ಬದಲು ಸುಮಲತಾ ಅವರು ತಮ್ಮ ಸ್ವಂತ ₹23.4 ಕೋಟಿ ಹಣವನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಎಲ್ಲಾ ಉಳ್ಳವರಿಗೆ ಮತ್ತೆ ನ್ಯಾಯ ಒದಗಿಸುವುದು ನ್ಯಾಯವೇ ಎಂದು ಕೇಳಿದ್ದಾರೆ. ಇದಕ್ಕೆ ಅಂಬರೀಶ್ ಅಭಿಮಾನಿಗಳು ಗರಂ ಆಗಿದ್ದು, ಚೇತನ್ ಅವರನ್ನು ನಿಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT