ಸೋಮವಾರ, ಜೂಲೈ 6, 2020
27 °C

ಇತಿಹಾಸದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಕಡೆಗಣನೆ: ಸಿದ್ದರಾಮನಂದಪುರಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ಹಿಂದುಳಿದ ಹೆಣ್ಣು ಮಗಳು ಹಾಗೂ ವಿಧವೆ ಎನ್ನುವ ಕಾರಣಕ್ಕೆ ಅಹಲ್ಯಾಬಾಯಿ ಹೋಳ್ಕರ್ ಅವರನ್ನು ಇತಿಹಾಸದಲ್ಲಿ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ನಾವು ಹಾಗೂ ಅವರ ವಾರಸುದಾರರು ಅಹಲ್ಯಾಬಾಯಿ ಅವರನ್ನು ಪರಿಚಯಿಸುವ ಕೆಲಸ ಮಾಡಬೇಕಿದೆ' ಎಂದು ಕಾಗಿನೆಲೆ ಕನಕ ಗುರುಪೀಠದ ಕಲಬುರ್ಗಿ ವಿಭಾಗದ ಸಿದ್ದರಾಮನಂದಪುರಿ ಸ್ವಾಮೀಜಿ ತಿಳಿಸಿದರು.

ಶ್ರೀನಗರದ ಕನಕದಾಸರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

'ಭಾರತೀಯ ಇತಿಹಾಸದಲ್ಲಿ ಆಳ್ವಿಕೆ ನಡೆಸಿದ ರಾಣಿಯರಲ್ಲಿ ಅಹಲ್ಯಾಬಾಯಿ ಅವರು ಮೊದಲ ಪಂಕ್ತಿಗೆ ಸೇರುತ್ತಾರೆ. ಎಲ್ಲ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ. ಹಿಂದೂ ಧರ್ಮಕ್ಕೆ ಕೊಡುಗೆ ಅಪಾರ. ಹೆಸರಿಲ್ಲದ ಸಣ್ಣಪುಟ್ಟ ಸಾಧಕರನ್ನು 'ದೇಶದ ರಕ್ಷಕರು, ಜಗತ್ತಿನ ಸೇವಕರು' ಎಂದು ಅಬ್ಬರದ ಪ್ರಚಾರ ನೀಡುತ್ತೇವೆ. ಜಾತಿಯನ್ನು ನೋಡಿ ಪ್ರಚಾರ ಮಾಡುವ ವ್ಯವಸ್ಥೆ ಇಂದಿಗೂ ಜೀವಂತ' ಎಂದರು.

ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ,' ಪುರುಷ ಪ್ರಧಾನ ದೇಶದಲ್ಲಿ ಒಬ್ಬ ಮಹಿಳೆಯಾಗಿ ಅಹಲ್ಯಾಬಾಯಿ ಹೋಳ್ಕರ್ ಅವರ ಸಾಧನೆ ಅಪಾರ. ಹಲವು ಧಾರ್ಮಿಕ ಸ್ಥಳಗಳಲ್ಲಿ ಈಗಲೂ ಅವರ ಸಾಧನೆಗಳ ಕುರುಹುಗಳಿವೆ. ಮುಂದಿನ ದಿನಗಳಲ್ಲಿ ಅವರ ಸಾಧನೆಗಳು ಎಲ್ಲರಿಗೂ ತಲುಪಬೇಕು' ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು