ಸೋಮವಾರ, ಸೆಪ್ಟೆಂಬರ್ 23, 2019
26 °C

ಅವಧಿ ಪೂರ್ವ ವರ್ಗಾವಣೆ: ಅರ್ಜಿ ಹಿಂಪಡೆದ ಅಲೋಕ್ ಕುಮಾರ್

Published:
Updated:

 ಬೆಂಗಳೂರು: ‘ಬೆಂಗಳೂರು ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ನನ್ನನ್ನು ಅವಧಿ ಪೂರ್ವದಲ್ಲಿ ವರ್ಗಾವಣೆ ಮಾಡಲಾಗಿದ್ದು ಈ ಆದೇಶ ರದ್ದು ಮಾಡಬೇಕು’ ಎಂದು ಕೋರಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಸಿಎಟಿ) ಸಲ್ಲಿಸಿದ್ದ ಅರ್ಜಿಯನ್ನು ಅಲೋಕ್‌ ಕುಮಾರ್ ಹಿಂಪಡೆದಿದ್ದಾರೆ.

ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಈ ಅರ್ಜಿಯನ್ನು ಸಿಎಟಿ ನ್ಯಾಯಾಂಗ ಸದಸ್ಯ ಕೆ.ಎಂ.ಸುರೇಶ್ ಹಾಗೂ ಆಡಳಿತಾಂಗ ಸದಸ್ಯ ಎ.ಎಂ. ಶಂಕರ್‌ ಶುಕ್ರವಾರ ಬೆಳಗ್ಗೆ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅಲೋಕ್ ಕುಮಾರ್ ಪರ ವಕೀಲರು ನ್ಯಾಯಪೀಠಕ್ಕೆ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿ ಅರ್ಜಿ ಹಿಂಪಡೆಯುತ್ತಿರುವುದಾಗಿ ತಿಳಿಸಿದರು. ಹಿಂಪಡೆಯಲು ಯಾವುದೇ ಕಾರಣ ತಿಳಿಸಿಲ್ಲ. ಆಲೋಕ್ ಕುಮಾರ್ ಅವರನ್ನು 2019ರ ಜೂನ್‌ 17ರಂದು ಬೆಂಗಳೂರು ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಇದೇ 3 ರಂದು ರಾಜ್ಯ ಪೊಲೀಸ್‌ ಮೀಸಲು ಪಡೆ (ಕೆಎಸ್‌ಆರ್‌ಪಿ) ಎಡಿಜಿಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿತ್ತು.

Post Comments (+)