ಬೆಂಗಳೂರು: ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಮನೆಯ ಟೆರೇಸ್ ಮೇಲಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ದೇವಸಂದ್ರದ ನೇತ್ರಾವತಿ ಲೇಔಟ್ನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ

ದೇವಸಂದ್ರದ ನೇತ್ರಾವತಿ ಲೇಔಟ್ ನಿವಾಸಿ ಗೋಪಾಲ್ ಸಿಂಗ್ (38) ಮೃತ. ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಂಗ್ ಅವರು ಕೆ.ಆರ್.ಪುರದ ನೇತ್ರಾವತಿ ಲೇಔಟ್ನಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಪಾಲಕರೊಂದಿಗೆ ವಾಸವಾಗಿದ್ದರು.

ಶುಕ್ರವಾರ ರಾತ್ರಿ ಸಹೋದರಿ ಮತ್ತು ಪಾಲಕರ ಜತೆ ಟೆರೇಸ್ ಮೇಲೆ ಗೋಪಾಲ್ ಸಿಂಗ್ ಕುಳಿತಿಕೊಂಡಿದ್ದರು. ಕೆಲ ಹೊತ್ತಿನ ಬಳಿಕ, ‘ಮೇಲಿನ ಬಾಗಿಲು ಹಾಕಿಕೊಂಡು ಬರುತ್ತೇನೆ. ನೀವು ಕೆಳಗೆ ಹೋಗಿ’ ಎಂದು ಪಾಲಕರನ್ನು ಕೆಳಗೆ ಕಳುಹಿಸಿದ್ದರು. ಬಳಿಕ ಟೆರೇಸ್ ಮೇಲೆ ವಾಯುವಿಹಾರ ಮಾಡುವ ವೇಳೆ ಕಾಲು ಜಾರಿ ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗಿದೆ.

ಆರಂಭದಲ್ಲಿ ಗೋಪಾಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆದರೆ, ಅವರ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಈ ಸಾವಿನ ಬಗ್ಗೆ ಅನುಮಾನ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕೆ.ಆರ್.ಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.