ಬೆಂಗಳೂರು: ₹1 ಕೋಟಿ ಹಣ ಪಡೆದು ವಂಚಿಸಿದ್ದ ಆರೋಪದ ಅಡಿ ಮೂವರನ್ನು ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಟಿ.ದಾಸರಹಳ್ಳಿಯ ಶಾಂತಿ ಲೇಔಟ್ನ ಅಂಬರೀಶ್ (33), ಸಾಯಿ ಲೇಟ್ನ ಜೆ. ಮಾರ್ಟಿನ್ (35), ಸದಾನಂದ ನಗರದ ಶ್ರೀನಿವಾಸ್ ವರ್ಮಾ(55) ಬಂಧಿತರು.

ಬಂಧಿತರಿಂದ ₹97.50 ಲಕ್ಷವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಜಯಚಂದ್ರ ಎಂಬುವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

‘ಜಯಚಂದ್ರ ಅವರ ಸಂಬಂಧಿಯಾದ ಅಶ್ವಿನಿಗೆ ಆರೋಪಿ ಶ್ರೀನಿವಾಸ್ ಪರಿಚಯವಾಗಿದ್ದ. ₹1 ಕೋಟಿ ಹಣವನ್ನು ನೀಡಿದರೆ, ಅದನ್ನು ನನಗೆ ಪರಿಚಯಸ್ಥರಾದ ಸಚಿನ್ ಹಾಗೂ ಅಗರ್ವಾಲ್ಗೆ ಕೊಟ್ಟು ಒಂದೇ ತಾಸಿನಲ್ಲಿ ₹1 ಕೋಟಿಗೆ ₹20 ಲಕ್ಷ ಸೇರಿಸಿ ಆರ್ಟಿಜಿಎಸ್ ಮೂಲಕ ತಮ್ಮ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಶ್ರೀನಿವಾಸ್ ನಂಬಿಸಿದ್ದ. ಶ್ರೀನಿವಾಸ್ ಮಾತು ನಂಬಿದ್ದ ಜಯಚಂದ್ರ ಅವರು ತಮ್ಮ ಸಂಬಂಧಿಯ ಜತೆಗೆ ಮಾರ್ಟಿನ್ ಕಚೇರಿ ತೆರಳಿ ಹಣ ನೀಡಿದ್ದರು. ಹಣವನ್ನು ಬೇರೆ ಸ್ಥಳದಲ್ಲಿ ಎಣಿಕೆ ಮಾಡಿ ಸಚಿನ್ಗೆ ತಲುಪಿಸಲಾಗುವುದು. ಅದಾದ ಮೇಲೆ ಬ್ಯಾಂಕ್ಗೆ ಹಣ ಜಮೆಯಾಗಲಿದೆ ಎಂದು ಹೇಳಿ ವಂಚಿಸಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.