ಬೆಂಗಳೂರು: ಅದ್ವೈತ ಹುಂಡೈ ಸಂಸ್ಥೆಯು ಮಾರತ್‌ಹಳ್ಳಿಯ ಹೊರವರ್ತುಲ ರಸ್ತೆಯಲ್ಲಿರುವ ತನ್ನ ಕೇಂದ್ರದಲ್ಲಿ ‘ಆಟೋಮೋಟಿವ್ ರಾಪ್ಸೋಡಿ’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ವರ್ಣಚಿತ್ರ ಪ್ರದರ್ಶನ ಕಲಾ ಪ್ರೇಮಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ವಿದಿತಾ ಸಿಂಗ್ ಬರ್ವಾನಿ ಅವರು ರಚಿಸಿದ ಕಲಾಕೃತಿಗಳ ಪ್ರದರ್ಶನ ಇದಾಗಿದೆ. ಆ.15ರಂದು ಈ ಪ್ರದರ್ಶನಕ್ಕೆ ಚಾಲನೆ ದೊರೆತಿದ್ದು, ಭಾನುವಾರ ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ.
ಈ ಪ್ರದರ್ಶನದಲ್ಲಿ ‘ವಿಂಟೇಜ್ ಕಾರುಗಳ’ ವೈಭವ ಅನಾವರಣಗೊಂಡಿದೆ. ಕಾರುಗಳ ತಾಂತ್ರಿಕ ವೈಶಿಷ್ಟ್ಯಗಳನ್ನೂ ಕಲಾವಿದೆ ಚಿತ್ರಿಸಿದ್ದಾರೆ.