ಬೆಂಗಳೂರು: ನಗರದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವಾಹನ ನಿಲುಗಡೆಯ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಆಟೊ ಚಾಲಕ ಪರಾರಿ ಆಗಿದ್ದಾನೆ ಎಂಬ ಆರೋಪವಿದೆ. ಕ್ಯಾಬ್ ಅನ್ನು ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶುಕ್ರವಾರ ಸಂಜೆ 5.30ರ ಸುಮಾರಿಗೆ ಕ್ಯಾಬ್ ಚಾಲಕರೊಬ್ಬರು ಬಿವಿಕೆ ಅಯ್ಯಂಗಾರ್ ರಸ್ತೆಗೆ ವ್ಯಕ್ತಿಯೊಬ್ಬರನ್ನು ಬಿಡಲು ಬಂದಿದ್ದರು. ಅದೇ ಸ್ಥಳಕ್ಕೆ ಬಂದಿದ್ದ ಆಟೊ ಚಾಲಕ, ಕ್ಯಾಬ್ ತೆಗೆಯುವಂತೆ ಹೇಳಿದ್ದ. ಚಾಲಕ ಸುಂದರ್ ಅಲ್ಲಿಂದ ಕ್ಯಾಬ್ ಹಿಂದಕ್ಕೆ ತೆಗೆದಿದ್ದಾರೆ. ಅದಾದ ಕೆಲವೇ ಕ್ಷಣಗಳ ಬಳಿಕ ಆಟೊ ಚಾಲಕ ವಾಪಸ್ ಬಂದು, ‘ಇದು ನನ್ನ ಜಾಗ’ ಎಂದು ಕಿರಿಕ್ ಮಾಡಿದ್ದಾನೆ. ಮಾತಿನ ಚಕಮಕಿ ನಡೆದು ಆಟೊದಿಂದ ಕ್ಯಾಬ್ಗೆ ಡಿಕ್ಕಿ ಹೊಡೆಸಿದ್ದಾನೆ. ಕ್ಯಾಬ್ ಚಾಲಕ ಘಟನೆಯ ವಿಡಿಯೊ ಮಾಡಲು ಮುಂದಾದ ವೇಳೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.