ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಆತ್ಮನಿರ್ಭರ ಕಲ್ಪನೆಗೆ ಆದ್ಯತೆ ನೀಡಲು ಚಿಂತನೆ

Last Updated 31 ಜುಲೈ 2020, 21:53 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ‘ಆತ್ಮನಿರ್ಭರ’ ಯೋಜನೆಯಿಂದ ಪ್ರೇರೇಪಿತಗೊಂಡಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌), ಮುಂದಿನ ಐದು ವರ್ಷಗಳಲ್ಲಿಸ್ವದೇಶಿ ಕಂಪನಿಗಳಿಂದ ₹6,308 ಕೋಟಿ ಮೊತ್ತದ ಯಂತ್ರಗಳು ಅಥವಾ ಸಾಧನಗಳನ್ನು ಖರೀದಿಸಲು ಮುಂದಾಗಿದೆ.

‘ಮೇಕ್‌ ಇನ್‌ ಇಂಡಿಯಾ’ ಅಡಿ ನೋಂದಾಯಿಸಲ್ಪಟ್ಟಿರುವ ಕಂಪನಿಗಳಿಗೆ ಈ ಗುತ್ತಿಗೆ ನೀಡಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ನೀಲನಕ್ಷೆ ತಯಾರಿಸುತ್ತಿದೆ.

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ 72 ಕಿ.ಮೀ. ಮೆಟ್ರೊ ರೈಲು ಮಾರ್ಗ ನಿರ್ಮಿಸುತ್ತಿರುವ ಬಿಎಂಆರ್‌ಸಿಎಲ್‌, ಮತ್ತೆರಡು ಮಾರ್ಗಗಳ (2ಎ ಮತ್ತು 2ಬಿ) ನಿರ್ಮಾಣಕ್ಕೆ ಕೇಂದ್ರಸರ್ಕಾರದ ಅನುಮೋದನೆ ಕಾಯುತ್ತಿದೆ. ಈ ಹಂತದಲ್ಲಿ ಒಟ್ಟು 56.15 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣಗೊಳ್ಳಲಿದೆ.

ಎರಡನೇ ಹಂತದಲ್ಲಿ, ಬಹುತೇಕ ಎಲ್ಲ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿತ್ತು, ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಮುಂದೆ, ಉಪಕರಣಗಳ ಅಥವಾ ಬೋಗಿಗಳ ಖರೀದಿ ವೇಳೆ ದೇಶೀಯ ಕಂಪನಿಗಳಿಗೆ ಆದ್ಯತೆ ನೀಡಲು ನಿಗಮ ಚಿಂತನೆ ನಡೆಸಿದೆ.

ಬಿಎಂಆರ್‌ಸಿಎಲ್‌ನ ಸದ್ಯದ ತಾತ್ಕಾಲಿಕ ಯೋಜನೆ ಪ್ರಕಾರ, ₹2,986 ಕೋಟಿ ವೆಚ್ಚದಲ್ಲಿ ಆರು ಬೋಗಿಗಳ 53 ರೈಲುಗಳು, ₹237.83 ಕೋಟಿ ವೆಚ್ಚದಲ್ಲಿ ಮೂರು ಬೋಗಿಗಳ ರೈಲುಗಳು, ₹288 ಕೋಟಿ ವೆಚ್ಚದಲ್ಲಿ ಸ್ವಿಚ್‌ ಗೇರ್‌ಗಳು, ಬ್ರೇಕರ್ಸ್‌ ಹಾಗೂ ₹5 ಕೋಟಿ ವೆಚ್ಚದಲ್ಲಿ ವಾಟರ್‌ ಪಂಪ್‌ಗಳನ್ನು ಖರೀದಿಸಲಿದೆ.

‘ದೇಶದ ಎಲ್ಲ ಮೆಟ್ರೊ ರೈಲು ನಿಗಮಗಳು ಇದೇ ಮಾದರಿಯ ನೀಲನಕ್ಷೆಯನ್ನು ಸಿದ್ಧ ಮಾಡಿಕೊಳ್ಳಲಿವೆ. ಈ ನಿರ್ಧಾರದಿಂದ ದೇಶೀಯ ಕಂಪನಿಗಳ ಬೆಳವಣಿಗೆಯಾಗುವುದಲ್ಲದೆ, ಹೂಡಿಕೆಯೂ ಹರಿದು ಬರುವ ವಿಶ್ವಾಸವಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT