ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ ಖಂಡಿಸಿ ನೆಲಮಂಗಲ ಚಲೋ

Last Updated 9 ಫೆಬ್ರುವರಿ 2021, 18:52 IST
ಅಕ್ಷರ ಗಾತ್ರ

ನೆಲಮಂಗಲ: ದಲಿತರು ಮತ್ತು ಮುಸ್ಲೀಮರನ್ನು ಸರ್ಕಾರ ಎರಡನೇ ದರ್ಜೆ ಪ್ರಜೆಗಳಾಗಿ ನಡೆಸಿಕೊಳ್ಳುತ್ತಿದೆ ಎಂದು ಭೀಮ್ ಆರ್ಮಿ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ಆಜಾದ್ ರಾವಣ್ ಕಿಡಿ ಕಾರಿದರು.

ದಲಿತ ಮುಖಂಡ ಬಿ.ಆರ್‌.ಭಾಸ್ಕರ್‌ ಪ್ರಸಾದ್‌ ಅವರ ಮೇಲಿನ ಹಲ್ಲೆ ಮತ್ತು ಕೊಲೆ ಯತ್ನ ಖಂಡಿಸಿ ನಡೆದ ನೆಲಮಂಗಲ ಚಲೋ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಆರೋಪಿಗಳ ವಿರುದ್ಧ ಈವರೆಗೆ ಬಂಧಿಸದ ಪೊಲೀಸರ ನಡೆಯನ್ನು ಖಂಡಿಸುತ್ತೇನೆ. ಕ್ರಮ ಕೈಗೊಳ್ಳುವ ತನಕ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

‘ಪೊಲೀಸರಿಗೆ ಸಂಬಳ ನೀಡುತ್ತಿರುವುದು ಜನರ ರಕ್ಷಣೆಗೆ ಹೊರತು ಹಿತಾಸಕ್ತಿಗಳ ರಕ್ಷಣೆಗೆ ಅಲ್ಲ. ವಿಚಾರವಾದಿಗಳ ಕೊಲೆ ಮತ್ತು ಭಗವಾನ್‌ ಅವರಿಗೆ ಮಸಿ ಬಳಿದು ಪರೋಕ್ಷವಾಗಿ ನಮ್ಮನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಮಾಧ್ಯಮ, ಪೊಲೀಸ್‌ ವ್ಯವಸ್ಥೆ ಅಧಿಕಾರ ಶಾಹಿಗಳ ಕೈಗೊಂಬೆಯಾಗಿವೆ’ ಎಂದು ಆರೋಪಿಸಿದರು.

ಭೀಮ್‌ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ಯಶಪಾಲ್‌ ಬೋರೆ, ಸೋಷಿಯಲ್‌ ಡೆಮೊಕ್ರಾಟಿಕ್‌ ಪಾರ್ಟಿ, ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ತನಕ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT