ಭಾನುವಾರ, ಜೂಲೈ 5, 2020
27 °C

ಜೋರು ಗಾಳಿ; ಮತ್ತೆ ಕಳಚಿ ಬಿದ್ದ ಶೆಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆನೇಕಲ್‌, ಅತ್ತಿಬೆಲೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸೋಮವಾರ ಜೋರು ಗಾಳಿ ಬೀಸಿದ್ದು, ಸಾಧಾರಣ ಮಳೆಯೂ ಆಗಿದೆ.

ಭಾನುವಾರ ಸಂಜೆಯೂ ಧಾರಾಕಾರ ಮಳೆಯಾಗಿತ್ತು. ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ನಿರ್ಮಿಸಲಾಗಿದ್ದ ಕೋವಿಡ್–19 ತಪಾಸಣಾ ಕೇಂದ್ರದ ಶೆಡ್‌ ಕಳಚಿ ಬಿದ್ದಿತ್ತು. ಸೋಮವಾರ ಬೆಳಿಗ್ಗೆ ಶೆಡ್ ಮರು ನಿರ್ಮಾಣ ಮಾಡಲಾಗಿತ್ತು. ಸಂಜೆ ಮತ್ತೆ ಜೋರು ಗಾಳಿ ಬೀಸಿದ್ದರಿಂದ ಶೆಡ್ ಪುನಃ ಕಳಚಿ ಬಿದ್ದಿತು.

ತಹಶೀಲ್ದಾರ್, ಉಪ ವಿಭಾಧಿಕಾರಿ ಹಾಗೂ ಸಿಬ್ಬಂದಿ ಚೆಕ್‌ಪೋಸ್ಟ್‌ನಲ್ಲಿ ಇದ್ದರು. ಶೆಡ್ ಕಳಚಿ ಬೀಳುವ ವೇಳೆ ಅವರೆಲ್ಲ ಬೇರೆಡೆ ಓಡಿ ಹೋಗಿ ಆಶ್ರಯ ಪಡೆದಿದ್ದರು. ಕಂಪ್ಯೂಟರ್ ಹಾಗೂ ಇತರೆ ವಸ್ತುಗಳಿಗೆ ಹಾನಿ ಆಗಿದೆ. ದಾಖಲೆಗಳೂ ನೀರಿನಲ್ಲಿ ತೋಯ್ದಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.