ಬೆಂಗಳೂರು: ಚಿತ್ರದುರ್ಗದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಕಾರ್ಯನಿರತ ಪತ್ರಿಕಾ ವಿತರಕರ/ ಹಂಚಿಕೆದಾರರ ಸಂಘದ ಸಹಯೋಗದಲ್ಲಿ ಸೆಪ್ಟೆಂಬರ್ 8 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ 4 ನೇ ರಾಜ್ಯ ಸಮ್ಮೇಳನದಲ್ಲಿ ಅಂಗವಿಕಲ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಗುವುದು.
ರಾಜ್ಯದ ಯಾವುದೇ ನಗರ ಜಿಲ್ಲೆ ಹಾಗೂ ತಾಲೂಕಿನಲ್ಲಿರುವ ಅಂಗವಿಕಲ ಪತ್ರಿಕಾ ವಿತರಕರು ತಮ್ಮ ಪರಿಪೂರ್ಣ ಮಾಹಿತಿಯನ್ನು ದಿನಾಂಕ ಆಗಸ್ಟ್ 28ರ ಒಳಗೆ ಸಲ್ಲಿಸಬಹುದು.