ಬೆಂಗಳೂರು: ‘ಪೊಲೀಸರಿಗೂ ಸಾಂಸ್ಕೃತಿಕ ಪ್ರಜ್ಞೆ ಅಗತ್ಯ. ಈ ಪ್ರಜ್ಞೆಯು ಅವರನ್ನು ಮನುಷ್ಯರನ್ನಾಗಿ ಮಾಡುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರಿಗೆ ‘ವರನಟ ಡಾ.ರಾಜಕುಮಾರ್ ಸಿರಿಗನ್ನಡ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.

‘ರಾಜಕಾರಣಿಗಳಿಗೂ ಸಾಂಸ್ಕೃತಿಕ ಪ್ರಜ್ಞೆ ಇರಬೇಕೆಂದು ಬಯಸುತ್ತೇವೆ. ಆದರೆ, ಅವರಿಗೆ ಎಷ್ಟೋ ಸಾರಿ ಈ ಪ್ರಜ್ಞೆ ಇರುವುದಿಲ್ಲ. ಪೊಲೀಸರಿಗೆ ಸಾಂಸ್ಕೃತಿಕ ಪ್ರಜ್ಞೆಯಿದ್ದರೆ ಮಾನವೀಯತೆ ತಾನಾಗಿಯೇ ಬರುತ್ತದೆ. ಪೊಲೀಸರು ಎಂದರೇ ಏಕವಚನವೆಂಬ ಭಾವನೆಯಿದೆ. ಅವರು ಯಾವಾಗ ಬಹುವಚನ ಬಳಸುತ್ತಾರೆಂದು ನೋಡುತ್ತಾ ಇರುತ್ತೇವೆ. ಸಾಂಸ್ಕೃತಿಕ ಪ್ರಜ್ಞೆ ಹೊಂದಿರುವ ಶಿವರಾಂ ಅವರು ನಿವೃತ್ತಿಯ ಬಳಿಕವೂ ಮಲ್ಲೇಶ್ವರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ’ ಎಂದು ಹೇಳಿದರು.

‘ರಾಜಕುಮಾರ್ ಅವರು ಈಗಲೂ ಜನಮಾನಸದಲ್ಲಿ ಉಳಿದಿದ್ದಾರೆ. ಅವರು ಜನರನ್ನು ಗೌರವದಿಂದ ಕಂಡಿದ್ದರು. ಜನಸಾಮಾನ್ಯರ ಬಗ್ಗೆ ಗೌರವ ಇರುವವರು ಪ್ರಬುದ್ಧ ನಾಯಕರಾಗುತ್ತಾರೆ. ಕರ್ನಾಟಕದ ಭಕ್ತಿ ಪರಂಪರೆಗೆ ಅವರು ಜನಪ್ರಿಯತೆ ತಂದುಕೊಟ್ಟರು. ತಾರಾ ಮೌಲ್ಯವಿರುವ ಕಲಾವಿದ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ರಾಜಕುಮಾರ್ ತೋರಿಸಿಕೊಟ್ಟರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಐಜಿಪಿ ಗೋಪಾಲ್ ಬಿ. ಹೊಸೂರು, ‘ಪೊಲೀಸ್ ಇಲಾಖೆಯಲ್ಲಿ ನಾಯಕತ್ವ ಗುಣ ಮುಖ್ಯ. ಈ ಗುಣ ಉನ್ನತ ಹುದ್ದೆಯಿಂದ ಮಾತ್ರ ಬರುವುದಿಲ್ಲ. ಬದಲಾಗಿ ವ್ಯಕ್ತಿಗತವಾಗಿ ಬರುತ್ತದೆ. ನಾಯಕತ್ವ ಗುಣದ ಕೊರತೆಯಿಂದ ಪೊಲೀಸ್ ಇಲಾಖೆಗೆ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನೇಮಕಾತಿ ಪ್ರಕ್ರಿಯೆ, ವರ್ಗಾವಣೆ ಸೇರಿ ವಿವಿಧ ಕಾರಣಗಳಿಂದಲೂ ಕೆಲವರು ನಾಯಕತ್ವ ಗುಣವನ್ನು ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಿಬ್ಬಂದಿಯನ್ನು ಪ್ರೀತಿ ಗೌರವದಿಂದ ಕಾಣಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.