ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆ ಸುಧಾರಣೆಗಾಗಿ ನಗರ ಸಂಚಾರ ಪೊಲೀಸರು ಜಾರಿಗೆ ತಂದಿದ್ದ ‘ಅಸ್ತ್ರಂ’ ಯೋಜನೆಗೆ ಮೂರು ಪ್ರಶಸ್ತಿಗಳು ಲಭಿಸಿವೆ.

ಕಳೆದ ಜನವರಿಯಲ್ಲಿ ನಡೆದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ತಿಂಗಳು’ ಕಾರ್ಯಕ್ರಮದ ವೇಳೆ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.

ಎಂಜಿನಿಯರಿಂಗ್ ಎಕ್ಸಲೆನ್ಸ್ ಅವಾರ್ಡ್, ಇನ್ಫ್ರಾ ಲೀಡರ್ಶಿಪ್ ಪ್ರಶಸ್ತಿ–2024 ಹಾಗೂ ಉತ್ತಮ ಸಾರಿಗೆ ಉಪಕ್ರಮ ಪ್ರಶಸ್ತಿಗಳು ಲಭಿಸಿವೆ.

ಇದು ‘ಸ್ಮಾರ್ಟ್ ಎಂಜಿನ್’ ವ್ಯವಸ್ಥೆಯಾಗಿದ್ದು, ಕೃತಕ ಬುದ್ಧಿಮತ್ತೆ ಅಡಿ ನಗರದ ಯಾವ ಭಾಗದಲ್ಲಿ ಹೆಚ್ಚಿನ ದಟ್ಟಣೆಯಿದೆ ಎಂಬುದನ್ನು ಪತ್ತೆ ಹಚ್ಚುತ್ತದೆ. ಈ ‘ಸ್ಮಾರ್ಟ್ ಎಂಜಿನ್’, ಸಂಚಾರ ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ರವಾನಿಸಲಿದೆ. ಇದನ್ನು ಬಳಸಿಕೊಂಡು ಸಂಚಾರ ಸುಧಾರಣೆ ಮಾಡಲಾಗುತ್ತಿದೆ. ನಗರದ ಹಲವು ಜಂಕ್ಷನ್ಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.