ಬೆಂಗಳೂರು: ‘ಪ್ರೊ. ಎಲ್.ಎಸ್.ಶೇಷಗಿರಿ ರಾವ್ ಅವರ ಸಾಹಿತ್ಯ ಎಲ್ಲರಿಗೂ ತಲುಪುವಂತಾಗಲಿ’ ಎಂದು ಪ್ರಾಧ್ಯಾಪಕ ಬಿ.ಸಿ. ನಾಗೇಂದ್ರ ಕುಮಾರ್ ಹೇಳಿದರು.

ಕನ್ನಡ ಗೆಳೆಯರ ಬಳಗ ಗುರುವಾರ ಆಯೋಜಿಸಿದ್ದ ಪ್ರೊ.ಎಲ್.ಎಸ್. ಶೇಷಗಿರಿ ರಾವ್ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡದ ಶ್ರೇಷ್ಠ ವಿಮರ್ಶಕರಾದ ಶೇಷಗಿರಿ ರಾವ್ ಅವರು ವಿಮರ್ಶೆಗೆ ಒಂದು ಮಾದರಿಯನ್ನು ರೂಪಿಸಿದ್ದರು. ಶೇಷಗಿರಿ ರಾವ್ ಅವರ ಶತಮಾನೋತ್ಸವ ವರ್ಷದಲ್ಲಿ ಅವರ ಸಾಹಿತ್ಯದ ಕುರಿತು ಅರ್ಥಪೂರ್ಣವಾದ ಚರ್ಚೆಗಳಾಗಲಿ’ ಎಂದು ಹೇಳಿದರು.

ಪ್ರಾಧ್ಯಾಪಕ ಎನ್.ಎಸ್. ಶ್ರೀಧರಮೂರ್ತಿ, ‘ಕನ್ನಡ–ಇಂಗ್ಲೀಷ್ ಸಾಹಿತ್ಯ ಚರಿತ್ರೆ ಸೇರಿದಂತೆ ಗ್ರೀಕ್ ನಾಟಕಗಳಲ್ಲಿ ಎಲ್.ಎಸ್. ಶೇಷಗಿರಿ ರಾವ್ ಅವರಿಗೆ ಹೆಚ್ಚು ಆಸಕ್ತಿ ಇತ್ತು. ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಶ್ರೀಸಾಮಾನ್ಯನಿಗೆ ಕನ್ನಡ ಸಾಹಿತ್ಯ ಚರಿತ್ರೆ ಮಾಲಿಕೆಗೆ ಮೊದಲು ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಶೇಷಗಿರಿ ರಾವ್ ಅವರು ಬರೆದಿದ್ದರು‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.