ಬೆಂಗಳೂರು: ಚೊಕ್ಕನಹಳ್ಳಿಯ ಆಶ್ರಮವೊಂದರ ಶಾಲೆಯಿಂದ 11 ವರ್ಷದ ಬಾಲಕ ಚೇತನ್ ರೆಡ್ಡಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ ಜಿ.ಸಂಪತ್ ಕುಮಾರ್ (35) ಎಂಬುವವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
‘ಕೆಜಿಎಫ್ ಕೃಷ್ಣರಾಜಪುರ ನಿವಾಸಿ ಸಂಪತ್ ಕುಮಾರ್, ಫೆ.20ರಂದು ಬಾಲಕನ ಅಪಹರಿಸಿ ಕ್ಯಾಸಂಬಳ್ಳಿ ಬಳಿಯ ಕೆರೆಗೆ ತಳ್ಳಿ ಕೊಲೆ ಮಾಡಿದ್ದ. ಅಪಹರಣ ದೂರಿನ ತನಿಖೆಗೆ ಸಂಬಂಧಿಸಿ ಈತನ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಾಲಕ ಚೇತನ್, ಕೆಜಿಎಫ್ ಐವಾರಹಳ್ಳಿಯ ಪ್ರವೀಣ್‌ಕುಮಾರ್ – ಪುಷ್ಪಾವತಿ ದಂಪತಿ ಮಗ. ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಪುಷ್ಪಾವತಿ, ಆರೋಪಿಯನ್ನು 2021ರಲ್ಲಿ ಎರಡನೇ ಮದುವೆಯಾಗಿದ್ದರು. ಸಂಪತ್‌ಗೂ ಇದು ಎರಡನೇ ಮದುವೆಯಾಗಿತ್ತು.’
‘ಅತ್ತ, ವಿಚ್ಛೇದನದ ನಂತರ ಮಗನ ಪಾಲನೆ ಹೊಣೆ ಹೊತ್ತಿದ್ದ ಪ್ರವೀಣ್‌ಕುಮಾರ್, ಆತನನ್ನು ಆಶ್ರಮದ ಶಾಲೆಗೆ ಸೇರಿಸಿದ್ದರು. ಪುಷ್ಪಾವತಿ ಹಾಗೂ ಸಂಪತ್ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ‘ಸಂಪತ್ 2ನೇ ಪತ್ನಿ ಪುಷ್ಪಾವತಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ. ಬೇಸತ್ತ ಪುಷ್ಪಾವತಿ, ಮನೆ ಬಿಟ್ಟು ಹೋಗಿದ್ದು, ಇದರಿಂದ ಸಿಟ್ಟಾಗಿದ್ದ’ ಎಂದರು.
‘ಮನೆ ಬಿಟ್ಟು ಹೋಗಿದ್ದ 2ನೇ ಪತ್ನಿಯನ್ನು ಬೆದರಿಸಿ ವಾಪಸು ಕರೆತರಲು ಬಾಲಕನ ಅಪಹರಿಸಿದ್ದೆ. ಆಕೆ ಮೊಬೈಲ್‌ಗೆ ಸಂಪರ್ಕಕ್ಕೆ ಸಿಗದಿದ್ದರಿಂದ ಸಿಟ್ಟಾಗಿ ಬಾಲಕನ ಕೆರೆಗೆ ತಳ್ಳಿದೆ’ ಎಂದು ಆರೋಪಿ ಹೇಳಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.