ಶುಕ್ರವಾರ, ಜನವರಿ 27, 2023
26 °C

ಆಟೊ ಚಾಲಕರಿಗೆ ಬಜಾಜ್‌ನಿಂದ ದಿನಸಿ ಕಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ 500 ಆಟೊ ಚಾಲಕರಿಗೆ ಬಜಾಜ್ ಆಟೊ ಲಿಮಿಟೆಡ್ ವತಿಯಿಂದ ದಿನಸಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. 

ಹೊಸೂರು ಮುಖ್ಯರಸ್ತೆಯ ಜಿ.ಬಿ.ಪಾಳ್ಯದಲ್ಲಿರುವ ಅಂಬಾ ಬಜಾಜ್‌ ಬಳಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ಎ.ರಾಘವೇಂದ್ರ,‘ಲಾಕ್‌ಡೌನ್‌ನಿಂದಾಗಿ ಆಟೊ ಚಾಲಕರ ದುಡಿಮೆಗೆ ಹೊಡೆತ ಬಿದ್ದಿತ್ತು. ಆ ಸಂದರ್ಭದಲ್ಲಿ ಜೀವನ ನಿರ್ವಹಣೆಗೆ ಪರದಾಡಿದ್ದರು. ಇದನ್ನು ಮನಗಂಡ ಬಜಾಜ್, ಆಟೊ ಚಾಲಕರ ನೆರವಿಗೆ ನಿಂತಿದೆ’ ಎಂದರು.

‘ಸಂಸ್ಥೆಯು ಕಳೆದ ವರ್ಷ 10 ಸಾವಿರಕ್ಕೂ ಹೆಚ್ಚು ಬಡವರು ಹಾಗೂ ಆಟೊ ಚಾಲಕರ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿತ್ತು. ಈ ವರ್ಷ 12 ಸಾವಿರ ಮಂದಿಗೆ ಕಿಟ್ ವಿತರಿಸಲು ಯೋಜನೆ ರೂಪಿಸಿದೆ. ಈಗಾಗಲೇ ಎಂಟು ಸಾವಿರ ಕಿಟ್‌ಗಳ ವಿತರಣೆ ನಡೆದಿದೆ’ ಎಂದು ಹೇಳಿದರು.

ಅಂಬಾ ಬಜಾಜ್‌ನ ಪ್ರಧಾನ ವ್ಯವಸ್ಥಾಪಕ ಜಾನ್, ರಾಕೇಶ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು