ಬೆಂಗಳೂರು: ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಣಸವಾಡಿ ಮುಖ್ಯರಸ್ತೆಯ ಅಗ್ನಿಶಾಮಕ ಠಾಣೆಯ ಬಳಿ ಬಿಬಿಎಂಪಿ ವತಿಯಿಂದ ನೀರುಗಾಲುವೆ ಸೇತುವೆ ಮರು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಮಾರ್ಚ್ 3ರಿಂದ 90 ದಿನ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

ವಾಹನ ಸಂಚಾರ ನಿರ್ಬಂಧ: ಬಾಣಸವಾಡಿ ಮುಖ್ಯರಸ್ತೆ (ಅಗ್ನಿಶಾಮಕ ಠಾಣೆಯ ಬಳಿ) ವೇಮಣ್ಣ ಸರ್ಕಲ್ ಕಡೆಯಿಂದ ಉತ್ತಮ್ ಸಾಗರ್ ಜಂಕ್ಷನ್ ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ: ವೇಮಣ್ಣ ವೃತ್ತದ ಕಡೆಯಿಂದ ಉತ್ತಮ್ ಸಾಗರ್ ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು, ಚಾಲಕರು ಅಗ್ನಿಶಾಮಕ ಠಾಣೆಯ ಬಳಿ ಬಲಕ್ಕೆ ತಿರುವು ಪಡೆದುಕೊಳ್ಳಬೇಕು (ಈ ರಸ್ತೆಯು ಏಕಮುಖ ಸಂಚಾರ ರಸ್ತೆಯಾಗಿದ್ದು, ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಾಡು ಮಾಡಲಾಗಿದೆ). ಎರಡನೇ ಕ್ರಾಸ್ ಬಳಿ ಎಡಕ್ಕೆ ತಿರುವು ಪಡೆದು ಉತ್ತಮ್ ಸಾಗರ್ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.

ವಾಹನ ನಿಲುಗಡೆ ನಿರ್ಬಂಧ: ಬಾಣಸವಾಡಿ ಮುಖ್ಯರಸ್ತೆಯ ವೇಮಣ್ಣ ಸರ್ಕಲ್ನಿಂದ ಉತ್ತಮ್ ಸಾಗರ್ ಜಂಕ್ಷನ್ವರೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.