ಇನ್ನಷ್ಟು ದಿನ ಕಾಯುವುದು ಅನಿವಾರ್ಯ
1,200 ಚದರಡಿ ವಿಸ್ತೀರ್ಣಕ್ಕಿಂತ ದೊಡ್ಡ ನಿವೇಶಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಹಾಗೂ ವಾಣಿಜ್ಯ ಬಳಕೆಯ ಕಟ್ಟಡಗಳಿಗೆ ಸದ್ಯಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. 1,200 ಚದರಡಿ ವಿಸ್ತೀರ್ಣದವರೆಗಿನ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವ ಪ್ರಕ್ರಿಯೆ ಮುಗಿದ ಬಳಿಕ, ದೊಡ್ಡ ಕಟ್ಟಡಗಳಿಗೆ ಸಂಪರ್ಕ ನೀಡಲು ಪ್ರತ್ಯೇಕ ಕಾಯ್ದೆ ತರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಈ ವರ್ಷದ ಏಪ್ರಿಲ್‌ವರೆಗೆ ನಿರ್ಮಿಸಿರುವ ಎಲ್ಲ ರೀತಿಯ ಕಟ್ಟಡಗಳಿಗೆ ಸಿಸಿ, ಒಸಿಯಿಂದ ಒಮ್ಮೆಗೆ ಮಾತ್ರ ವಿನಾಯಿತಿ ನೀಡಿ, ದಂಡ ಕಟ್ಟಿಸಿಕೊಂಡು ವಿದ್ಯುತ್ ಸಂಪರ್ಕ ನೀಡಲು ಇಂಧನ ಇಲಾಖೆ ಉದ್ದೇಶಿಸಿದೆ. ಇದರ ಸಾಧಕ–ಬಾಧಕಗಳ ಬಗ್ಗೆ ಅಧ್ಯಯನ ನಡೆದಿದ್ದು, ಸದ್ಯದಲ್ಲೇ ಈ ವಿಷಯ ಸಚಿವ ಸಂಪುಟದ ಮುಂದೆ ಬರಲಿದೆ’ ಎಂದು ವಿವರಿಸಿದರು.