ಮಂಗಳವಾರ, ಆಗಸ್ಟ್ 3, 2021
28 °C

ಬೆಂಗಳೂರು: ವಾಹನಗಳಿಗೆ ನಕಲಿ ಆರ್.ಸಿ, ವಿಮೆ ಮಾಡಿಕೊಡುತ್ತಿದ್ದ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ವಾಹನಗಳ ನಕಲಿ ನೋಂದಣಿ ಪ್ರಮಾಣಪತ್ರ (ಆರ್‌.ಸಿ) ಮತ್ತು ವಿಮೆ ಮಾಡಿ ಕೊಡುತ್ತಿದ್ದ ಇಬ್ಬರನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಪೀಣ್ಯ ಬಳಿಯ ಇಂದಿರಾ ಪ್ರಿಯದರ್ಶಿನಿ ನಗರದ ಶ್ರೀಧರ್‌ (29) ಮತ್ತು ಕೆ.ಪಿ. ಅಗ್ರಹಾರ ಬಳಿ ಭುವನೇಶ್ವರಿ ನಗರದ ಸಂತೋಷ್‌ (20) ಬಂಧಿತರು.

ಆರೋಪಿಗಳು ಕಾರು ಮತ್ತು ದ್ವಿಚಕ್ರ ವಾಹನಗಳು ಸೇರಿ ಒಟ್ಟು 135 ವಾಹನಗಳಿಗೆ ₹ 3,000ದಿಂದ ₹ 4,000 ಹಣ ಪಡೆದು ನಕಲಿ ಆರ್.ಸಿ ಮಾಡಿಕೊಟ್ಟಿರುವುದು ಮತ್ತು 500 ವಾಹನಗಳಿಗೆ ₹ 500ರಿಂದ ₹ 1,000 ಪಡೆದು ನಕಲಿ ವಿಮೆ ಮಾಡಿಕೊಟ್ಟಿರುವುದು ವಿಚಾರಣೆಯಿಂದ ಗೊತ್ತಾಗಿದೆ.

‘ಆರೋಪಿಗಳು ಆರ್‌ಟಿಒ ಕಚೇರಿಯಿಂದ ಸ್ಮಾರ್ಟ್‌ ಕಾರ್ಡ್‌ಗಳನ್ನು ಕಳವು ಮಾಡಿ, ಅದರಲ್ಲಿದ್ದ ಹೆಸರನ್ನು ಅಳಸಿ ಮರು ಮುದ್ರಣ ಮಾಡಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ನಕಲಿ ಆರ್‌.ಸಿ ಕಾರ್ಡ್‌ ಮಾಡುತ್ತಿದ್ದರು. ಅಲ್ಲದೆ, ₹500 ರಿಂದ ₹1,000ಕ್ಕೆ ವಿಮೆ ಕೂಡಾ ಮಾಡಿಸಿಕೊಡುತ್ತಿದ್ದರು. ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಯಾಗಿದ್ದ (ಬ್ರೋಕರ್‌) ಸಂತೋಷ್‌, ಸ್ಮಾರ್ಟ್ ಕಾರ್ಡ್‌ಗಳನ್ನು ಕಳವು ಮಾಡಿ ಶ್ರೀಧರ್‌ಗೆ ನೀಡುತ್ತಿದ್ದ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು