ಪೀಣ್ಯ ದಾಸರಹಳ್ಳಿ: ‘ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮರು ತನಿಖೆ ನಡಸಬೇಕು. ಇಲ್ಲದಿದ್ದರೆ ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದು’ ಎಂದು ತ್ರಿಶೂಲ್ ಸೇನೆ ರಾಜ್ಯ ಅಧ್ಯಕ್ಷ ಗಂಗಾಧರ್ ಎಚ್ಚರಿಸಿದರು.
ಸೌಜನ್ಯಾಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಉಜಿರೆಯ ಅವರ ಮನೆಯಿಂದ ವಿಧಾನಸೌಧದವರೆಗೆ ತ್ರಿಶೂಲ್ ಸೇನೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು ನಾಗಸಂದ್ರದ ಮೆಟ್ರೊ ನಿಲ್ದಾಣ ಬಳಿ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು.
‘ಸೌಜನ್ಯಾ ಪ್ರಕರಣ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿನ ಶೋಷಣೆ, ಜೂಜು ,ಇಸ್ಪೀಟ್, ಮೀಟರ್ ಬಡ್ಡಿ ಹಾಗೂ ಎಲ್ಲಾತರಹದ ಶೋಷಣೆ ನಿಲ್ಲಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗುವುದು' ಎಂದರು.
‘ಸೌಜನ್ಯಾ ವಿಚಾರ ಇಟ್ಟುಕೊಂಡು ತ್ರಿಶೂಲ್ ಸೇನೆ ಕ್ರಾಂತಿ ಮಾಡಲು ಶುರುಮಾಡಿದೆ. ದೇಶದಲ್ಲಿ ಕ್ರಾಂತಿಯ ಅವಶ್ಯಕತೆ ಇದೆ. ಸಮಾಜದಲ್ಲಿ ನೆಡೆಯುತ್ತಿರುವ ದೌರ್ಜನ್ಯದ ವಿರುದ್ಧ ಜನರು ಜೊತೆಯಾಗಿ ನಿಂತರೆ ಸೌಜನ್ಯಾಗೆ ನ್ಯಾಯ ದೊರೆಯಲು ಸಾಧ್ಯ, ತ್ರಿಶೂಲ್ ಸೇನೆ ವತಿಯಿಂದ ಸೌಜನ್ಯಾ ತಾಯಿ ಸೇರಿದಂತೆ ಕರ್ನಾಟಕದ ಜನರ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ’ ಎಂದು ತಿಳಿಸಿದರು.
ಅಭಯ ಶೀಲಾ, ಅಭಯ ಕೃಷ್ಣಯ್ಯ, ರೇಖಾ ಶಿವಪಟೇಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.