ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ

Last Updated 9 ಫೆಬ್ರುವರಿ 2019, 14:23 IST
ಅಕ್ಷರ ಗಾತ್ರ

ಬೆಂಗಳೂರು: ಬಿಸಿಲು, ಧಗೆಯಿಂದ ಕಂಗೆಟ್ಟಿದ್ದ ರಾಜಧಾನಿಯ ಜನರಿಗೆ ಶನಿವಾರ ಸಂಜೆ ಸುರಿದ ಮಳೆತಂಪೆರೆದಿದೆ.

ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಉಂಟಾಗಿದ್ದು, ಸಂಜೆಯ ವೇಳೆಗೆ ಭಾರಿಗುಡುಗು, ಸಿಡಿಲುಸಹಿತ ಮಳೆ ಸುರಿಯಿತು.

’ಗಾಳಿಯಲ್ಲಿ ಒತ್ತಡ ಕಡಿಮೆಯಾಗಿ ಉಂಟಾಗುವ ಟ್ರಫ್‌ನಿಂದ ಈಗ ಮಳೆಯಾಗುತ್ತಿದೆ.ಮಾಲ್ಡೀವ್ಸ್‌ನಿಂದ ತೆಲಂಗಾಣದತ್ತಾ ಗಾಳಿ ಚಲಿಸುತ್ತಿದ್ದು,ಕಳೆದ ಮೂರು ದಿನಗಳಿಂದಲೂ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೂ ಎರಡು ದಿನಗಳು ರಾಜಧಾನಿಯಲ್ಲಿ ಗುಡುಗು, ಮಿಂಚು ಸಹಿತ ಮಳೆ ಮುಂದುವರೆಯಲಿದೆ.ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ ನಗರದಲ್ಲಿ ಭಾರಿ ಮಳೆ ಸುರಿದೆ. ಬೆಂಗಳೂರಿನ ಕೆಲವು ಕಡೆಗಳಲ್ಲಿ ಸುಮಾರು 50 ಮಿ.ಮೀನಷ್ಟು ಮಳೆಯಾಗಿದೆ ಎಂದರು.

ದಿಢೀರ್ ಮಳೆಯಿಂದ ರಾಜಧಾನಿಯ ಜನರುಪರದಾಡುವಂತಾಯಿತು.ಬೈಕ್ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡಿದರು. ಎಡೆಬಿಡದೆ ಮಳೆಸುರಿಯುತ್ತಿದ್ದು,ರಸ್ತೆಯ ತುಂಬೆಲ್ಲ ನೀರು ಹರಿಯುತ್ತಿದೆ.ಬೆಂಗಳೂರು ಸುತ್ತಮುತ್ತಲ ರಾಜ್ಯದಲ್ಲಿಯೂ ಮಳೆಯಾಗಿದೆ.ಕೋಲಾರದ ಕೆಲವೊಂದು ಪ್ರದೇಶದಲ್ಲಿ90 ಮಿ.ಮೀಟರ್‌ ನಷ್ಟು ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT