ಬುಧವಾರ, ಅಕ್ಟೋಬರ್ 21, 2020
26 °C

ಬೆಂಗಳೂರು ಸ್ವಚ್ಛತೆಯಲ್ಲಿ ಕುಸಿತ: ಎಎಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸ್ವಚ್ಛತೆಯಲ್ಲಿ ಬೆಂಗಳೂರು 194ನೇ ಸ್ಥಾನದಿಂದ 214ನೇ ಕುಸಿದಿದೆ. ಪಾಲಿಕೆಯ ಕಸ ವಿಲೇವಾರಿ ಜವಾಬ್ದಾರಿ ಮರೆತು ದಂಧೆಯಲ್ಲಿ ತೊಡಗಿದ್ದು, ಹತ್ತು ವರ್ಷ ಕಳೆದರೂ ಉತ್ತಮ ಸ್ಥಾನ ಗಳಿಸುವುದು ಹಗಲುಗನಸು’ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ವ್ಯಂಗ್ಯವಾಡಿದ್ದಾರೆ.

‘ಕಸದ ಮಾಫಿಯಾಗೆ ಸಂಪೂರ್ಣವಾಗಿ ತಲೆಬಾಗಿರುವ ಪಾಲಿಕೆ, ಪ್ರತಿ ವರ್ಷ ಕೋಟಿಗಟ್ಟಲೆ ಹಣವನ್ನು ಕಸ ವಿಲೇವಾರಿಗೆ ಖರ್ಚು ಮಾಡುತ್ತದೆ. ನಾಲ್ಕು ವರ್ಷದಿಂದಲೂ ಸ್ವಚ್ಛತೆಯಲ್ಲಿ 100ರ ಸ್ಥಾನದೊಳಗೆ ಬಂದಿಲ್ಲ. ಆದರೆ, ಪ್ರತಿ ವರ್ಷ ಸ್ವಚ್ಛ ಸರ್ವೇಕ್ಷಣೆಗೆ ಎಂದು ಜನರ ತೆರಿಗೆ ಹಣವನ್ನು ಹಾಳು ಮಾಡುತ್ತಿದೆ. ಇದರ ಬದಲು ಸ್ಪರ್ಧೆಯಲ್ಲಿ ಭಾಗವಹಿಸದಿರುವುದೇ ಉತ್ತಮ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು